ಕೋಲಾರ : ನಗರದ ಆರ್.ಜಿ.ಲೇಔಟ್‍ನ ಕೋಡಿ ಕಣ್ಣೂರು ಕೆರೆಯ ಏರಿಯ ಮೇಲೆ ಅಮ್ಮವಾರಿಪೇಟೆ ಮತ್ತು ಪೂಲ್ ಷಾ ಮೊಹಲ್ಲಾದಲ್ಲಿರುವ ಮಾಂಸದ ಅಂಗಡಿ ಮತ್ತು ಚಿಕನ್ ಸ್ವಚ್ಚಗೊಳಿಸುವಾಗ ಬರುವ ತ್ಯಾಜ್ಯವನ್ನು ಶ್ರೀನಿವಾಸಪುರ ಮುಖ್ಯ ರಸ್ತೆಯ ಬದಿ ಕೆರೆ ಭಾಗಕ್ಕೆ ಬಿಸಾಡಿ ಹೋಗುವುದರಿಂದ ಆರ್.ಜಿ.ಲೇಔಟ್‍ನ ಸಾರ್ವಜನಿಕರು ದುರ್ವಾಸನೆಯನ್ನು ತಾಳಲಾರದೆ ವಾಸ ಮಾಡಲು ಸಾಧ್ಯವಾಗುತ್ತಿಲ್ಲ.R G LAYOUT

ಇದರಿಂದ ರೋಗ ರುಜಿನಗಳು ಬರುವ ಸಾಧ್ಯತೆಗಳು ಸಹ ಇದ್ದು, ಆರ್.ಜಿ. ಲೇಔಟ್‍ಗೆ ನೀರು ಸಹ ಸರಬರಾಜು ಆಗುತ್ತಿಲ್ಲ ಹಾಗೂ ಚರಂಡಿಗಳಲ್ಲಿ ಗಿಡಗಂಟಿಗಳು ಬೆಳೆದು ಚರಂಡಿ ನೀರು ಸರಾಗವಾಗಿ ಹರಿಯದೆ ದುರ್ವಾಸನೆ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ನಾವು ನಗರಸಭೆಯ ಅಧಿಕಾರಿಗಳಿಗೆ ಹಲವಾರು ಬಾರಿ ಅರ್ಜಿಗಳನ್ನು ನೀಡಿದ್ದರೂ ಏನೂ ಪ್ರಯೋಜನವಾಗಿರುವುದಿಲ್ಲ.

ಆದ್ದರಿಂದ ಇಂದು ಜಿಲ್ಲಾಧಿಕಾರಿಗಳಿಗೆ ಆರ್.ಜಿ. ಲೇಔಟ್ ನಿವಾಸಿಗಳು ದೂರು ನೀಡಿದ್ದು, ತ್ಯಾಜ್ಯ ಬಿಸಾಡದಂತೆ ಬಂದೋಬಸ್ತ್ ಕ್ರಮ ಕೈಗೊಳ್ಳಬೇಕೆಂದು ಹಾಗೂ ನೀರು ಸರಬರಾಜು ವ್ಯವಸ್ಥೆ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ನೀಡಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, ಈ ಎಲ್ಲಾ ಸಮಸ್ಯೆಗಳಿಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

By suddi9

Leave a Reply

Your email address will not be published. Required fields are marked *