ಬಂಟ್ವಾಳ, : ಧ್ವನಿ ಬೆಳಕು ಸಂಯೋಜಕರ ಒಕ್ಕೂಟ ಇದರ ಬಂಟ್ವಾಳ ತಾಲೂಕು ವತಿಯಿಂದ ಚಾರ್ಮಾಡಿ ಕುಕ್ಕಾವು ಹಾಗೂ ದಿಡುಪೆ ವ್ಯಾಪ್ತಿಯ ನೆರೆಪೀಡಿತ ಸಂತ್ರಸ್ತರಿಗೆ ಅಕ್ಕಿಯನ್ನು ವಿತರಿಸಲಾಯಿತು.
ಇಲ್ಲಿನ 18 ಮನೆಗಳಿಗೆ ತಲಾ 30 ಕೆ.ಜಿ. ಅಕ್ಕಿಯನ್ನು ನೀಡಲಾಯಿತು. ಸಾರ್ವಜನಿಕರಿಗೆ ಹೊರೆಯಾಗಬಾರದೆಂಬ ದೃಷ್ಟಿಕೋನವನ್ನು ಇಟ್ಟುಕೊಂಡು ಕೇವಲ ಒಕ್ಕೂಟದ ಸದಸ್ಯರಿಂದ ಮಾತ್ರವೇ ಅಕ್ಕಿ ಸಂಗ್ರಹಿಸಲಾಗಿದೆ. ಇಂತಹ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಒಕ್ಕೂಟವು ಇನ್ನು ಉಳಿದ ಸಂತ್ರಸ್ತರಿಗೂ ಅಕ್ಕಿಯೊಂದಿಗೆ ಇನ್ನಿತರ ನಿತ್ಯ ಬಳಕೆಯ ವಸ್ತುಗಳನ್ನು ಸದ್ಯದಲ್ಲೇ ನೀಡುವ ಉದ್ದೇಶವನ್ನು ಇಟ್ಟುಕೊಂಡಿದೆ ಎಂದು ಒಕ್ಕೂಟ ತಿಳಿಸಿದೆ.

27 btl belaku
ಈ ಸಂದರ್ಭದಲ್ಲಿ ಧ್ವನಿವರ್ದಕ-ದೀಪಾಲಂಕಾರ ಮಾಲಕರ ಸಂಘದ ಜಿಲ್ಲಾಧ್ಯಕ್ಷ ರಾಜಶೇಖರ ಶೆಟ್ಟಿ ಕುಡ್ತಮುಗೇರು, ಧ್ವನಿ ಬೆಳಕು ಬಂಟ್ವಾಳ ತಾಲೂಕಾಧ್ಯಕ್ಷ ಶೇಖ್ ಸುಭಾನ್, ಎರ್ಮಾಲಪಲ್ಕೆ ನಿವಾಸಿ ಪುರಂದರ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *