ಬಂಟ್ವಾಳ : ಮಾಜಿ ಸಚಿವ ಬಿ.ರಮಾನಾಥ ರೈ ಅವರ ನೇತೃತ್ವದಲ್ಲಿ ಐದು ದಿನಗಳ ಕಾಲ ಬಂಟ್ವಾಳ ಸಮೀಪದ ಜಕ್ರಿಬೆಟ್ಟುವಿನ ದಾಸ ರೈ ಮೈದಾನದಲ್ಲಿ  ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ  ವತಿಯಿಂದ ಆರಾಧಿಸಲ್ಪಟ್ಟ 16 ನೇ ವರ್ಷದ  ಶ್ರೀ ಗಣೇಶನ  ಶೋಭಾಯಾತ್ರೆಯ ವೈಭಯುತವಾಗಿ ನೆಡೆಯುವುದರೊಂದಿಗೆ ಸಂಪನ್ನಗೊಂಡಿತು..

IMG-20190906-WA0166
ಆರಾಧನಾ ಮಂಟಪದಲ್ಲಿ  ಗಣಪನಿಗೆ ವಿಸರ್ಜನಾ ಪೂಜೆ ನಡೆದ ಬಳಿಕ ಶೋಭಾಯಾತ್ರೆ ಆರಂಭಗೊಂಡಿತು. ಜಕ್ರಿಬೆಟ್ಟು ಜಂಕ್ಷನ್ ಗೆ ತೆರಳಿ ವಾಪಾಸ್ ಆದೇ ದಾರಿಯಾಗಿ ಬಂಟ್ವಾಳ ಬೈಪಾಸ್,ಭಂಡಾರಿಬೆಟ್ಟು ನೆರೆ ವಿಮೋಚನಾ ರಸ್ತೆಯ ಮೂಲಕ ಬಂಟ್ವಾಳ ಪೇಟೆ,ತ್ಯಾಗರಾಜ ರಸ್ತೆಯಲ್ಲಿ ಸಾಗಿ ಬಂದು ಶ್ರೀ ತಿರುಮಲ ವೆಂಕಟರಮಣ ದೇವಳದ ಮುಂಭಾಗದ ನೇತ್ರಾವತಿ ನದಿಯಲ್ಲಿ ಶ್ರೀಗಣೇಶನ ಜಲಸ್ತಂಭನಗೊಳಿಸಲಾಯಿತು. ಹುಲಿ ವೇಷ, ವಿವಿಧ ಅಕರ್ಷಕ ಟ್ಯಾಬ್ಲೋಗಳು,ಸ್ತಬ್ದ ಚಿತ್ರ, ನಾಸಿಕ್ ಬ್ಯಾಂಡ್ ,  ಗೊಂಬೆ  ಕುಣಿತ,  ತಾಲೀಮು ಮೆರವಣಿಗೆಗೆ ಮೆರಗು ನೀಡಿತು .

IMG-20190906-WA0163

ವಿಸರ್ಜನಾ ಪೂಜೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ರಮಾನಾಥ ರೈದೇಶದ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನದ ಪ್ರತಿಯೊಂದು ಅಂಗವೂ ಬಲಿಷ್ಠ ವಾಗಿ ಉಳಿಯಬೇಕು, ಆರ್ಥಿಕ ವ್ಯವಸ್ಥೆಯೂ ಕುಸಿಯದಂತೆ ಮತ್ತು ಇಡೀ ನಾಡಿಗೆ ಸಮೃದ್ದಿ,ಶಾಂತಿ,ನೆಮ್ಮದಿ ನೆಲಸುವಲ್ಲಿ ಶ್ರೀಗಣೇಶ ಅನುಗ್ರಹಿಸಲಿ  ಎಂದು ಆಶಿಸಿದರು.

IMG-20190906-WA0161ಆಚರಣಾ ಸಮಿತಿ ಅಧ್ಯಕ್ಷ ಪದ್ಮಶೇಖರ ಜೈನ್,ಪದಾಧಿಕಾರಿಗಳಾದ ಚಂದ್ರಪ್ರಕಾಶ ಶೆಟ್ಟಿ,ಬೇಬಿ ಕುಂದರ್,ಸುದೀಪ್ ಕುಮಾರ್ ಶೆಟ್ಟಿ,ಜನಾರ್ಧನ ಚಂಡ್ತಿಮಾರ್,ಪಿಯೂಸ್ ರೊಡ್ರಿಗಸ್,ರಾಜೀವ ಶೆಟ್ಟಿ ಎಡ್ತೂರು, ಎನ್.  ಮಹಾಬಲ ಬಂಗೇರ,ವಾಸುಪೂಜಾರಿ ಲೊರೆಟ್ಟೋ,ಮಾಯಿಲಪ್ಪ ಸಾಲ್ಯಾನ್,ಪ್ರವೀಣ್ ಕಿಣಿ,ಸಂತೀಶ್ ಪಿಲಿಂಗಾಲ್,ಗಂಗಾಧರ ಪೂಜಾರಿ,ವೆಂಕಪ್ಪ ಪೂಜಾರಿ ಬಂಟ್ವಾಳ ಮೊದಲಾದವರಿದ್ದರು.ವೇ.ಮೂ.ಸುದರ್ಶನ್ ಬಲ್ಲಾಳ್ ಪೌರೋಹಿತ್ಯ ವಹಿಸಿದ್ದರು.

IMG-20190907-WA0000

By suddi9

Leave a Reply

Your email address will not be published. Required fields are marked *