ಬಂಟ್ವಾಳ: ಬೆಂಗಳೂರಿನ ಲಹರಿ ಮ್ಯೂಸಿಕ್ ಕಂಪೆನಿಯಿಂದ ಇತ್ತೀಚೆಗೆ ಬಿಡುಗಡೆಯಾದ ಹಿರಿಯ ಸಾಹಿತಿ ದಿ. ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ ವಿರಚಿತ ಭಾವಗೀತೆಗಳ ಹಾರು ಹಕ್ಕಿಯ ಹಾರು
ಆರಂಭದಲ್ಲಿ ಶ್ರೀ ಅಣ್ಣಪ್ಪ ದೈವ ಅಮ್ಟಾಡಿ ಗ್ರಾಮಕ್ಕೆ ಹೇಗೆ ಬಂತು ಎನ್ನುವ ಉಲ್ಲೇಖವಿದ್ದು ಧರ್ಮಸ್ಥಳದಿಂದ ಏರ್ಯಕ್ಕೆ ಬಂದು ಬೀಡಿನ ರಕ್ಷಾ ದೈವವಾಗಿ ನೆಲೆಯಾಗಿದೆ ಎನ್ನುವ ಪೀಠಿಕೆಯಿದೆ, ಇದು ಸತ್ಯಕ್ಕೆ ದೂರವಾದ ವಿಚಾರವಾಗಿದ್ದು ಖಂಡನೀಯ, ಈ ತಪ್ಪನ್ನು ಲಹರಿ ಮ್ಯೂಸಿಕ್ ಕಂಪೆನಿ ಶೀಘ್ರ ಸರಿಪಡಿಸುವಂತೆ ಅಮ್ಟಾಡಿ ಶ್ರೀ ಮಂಗ್ಲಿಮಾರ್ ಅಣ್ಣಪ್ಪ ಪಂಜುರ್ಲಿ ಮತ್ತು ಧೂಮಾವತಿ ಬಂಟ ಮತ್ತು ಕಲಾಯಿ ದುರ್ಗಾಪರಮೇಶ್ವರೀ, ಮಹಾಮ್ಮಾಯಿ ಪರಿವಾರ ದೈವಗಳ ಆರಾಧನ ಸಮಿತಿ ಒತ್ತಾಯಿಸಿದೆ.
ಆರಂಭದಲ್ಲಿ ಶ್ರೀ ಅಣ್ಣಪ್ಪ ದೈವ ಅಮ್ಟಾಡಿ ಗ್ರಾಮಕ್ಕೆ ಹೇಗೆ ಬಂತು ಎನ್ನುವ ಉಲ್ಲೇಖವಿದ್ದು ಧರ್ಮಸ್ಥಳದಿಂದ ಏರ್ಯಕ್ಕೆ ಬಂದು ಬೀಡಿನ ರಕ್ಷಾ ದೈವವಾಗಿ ನೆಲೆಯಾಗಿದೆ ಎನ್ನುವ ಪೀಠಿಕೆಯಿದೆ, ಇದು ಸತ್ಯಕ್ಕೆ ದೂರವಾದ ವಿಚಾರವಾಗಿದ್ದು ಖಂಡನೀಯ, ಈ ತಪ್ಪನ್ನು ಲಹರಿ ಮ್ಯೂಸಿಕ್ ಕಂಪೆನಿ ಶೀಘ್ರ ಸರಿಪಡಿಸುವಂತೆ ಅಮ್ಟಾಡಿ ಶ್ರೀ ಮಂಗ್ಲಿಮಾರ್ ಅಣ್ಣಪ್ಪ ಪಂಜುರ್ಲಿ ಮತ್ತು ಧೂಮಾವತಿ ಬಂಟ ಮತ್ತು ಕಲಾಯಿ ದುರ್ಗಾಪರಮೇಶ್ವರೀ, ಮಹಾಮ್ಮಾಯಿ ಪರಿವಾರ ದೈವಗಳ ಆರಾಧನ ಸಮಿತಿ ಒತ್ತಾಯಿಸಿದೆ.ಸೋಮವಾರ ಬೆಳಿಗ್ಗೆ ಬಿ.ಸಿ.ರೋಡಿನ ಪ್ರೆಸ್ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಸಮಿತಿಯ ಪ್ರಮುಖರಾದ ಪ್ರೇಮನಾಥ್ ಕೆ. ಮಾಹಿತಿ ನೀಡಿ ಲಹರಿ ಸಂಸ್ಥೆ ಬಿಡುಗಡೆ ಮಾಡಿದ ಧ್ವನಿ ಸುರಳಿಯ ಆಡಿಯೋ ತುಣುಕು ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲಾತಾಣದಲ್ಲಿ ಹರಡುತ್ತಿದ್ದು ಅಮ್ಟಾಡಿಗೆ ದೈವ ಬಂದ ಹಿನ್ನಲೆಯ ಬಗ್ಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ. ಏರ್ಯ ಮನೆತನವು ಎಂದಿಗೂ ಬೀಡು ಆಗಿರಲಿಲ್ಲ ಹಾಗೂ ಶ್ರೀ ಅಣ್ಣಪ್ಪ ಸ್ವಾಮಿ ದೈವವು ಎಂದಿಗೂ ಏರ್ಯ ಮನೆತನದವರ ದೈವವೂ ಆಗಿರಲಿಲ್ಲ. ಶ್ರೀ ಅಣ್ಣಪ್ಪ ಸ್ವಾಮಿ ಗ್ರಾಮ ದೈವವಾಗಿದ್ದು ತಪ್ಪು ಸಂದೇಶದ ವಿಚಾರವಾಗಿ ಇತ್ತೀಚೆಗೆ ಗ್ರಾಮಸ್ಥರೆಲ್ಲರೂ ಮಂಗ್ಲಿಮಾರ್ ದೈವಸ್ಥಾನದಲ್ಲಿ ವಿಶೇಷ ಸಭೆ ನಡೆಸಿ ಎಲ್ಲರ ಒಮ್ಮತದ ಅಭಿಪ್ರಾಯದಂತೆ ಖಂಡನಾ ನಿರ್ಣಯವನ್ನು ಕೈಗೊಳ್ಳಲಾಗಿದೆ. ದಿ. ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು ಬರೆದಿರುವಂತಹ ಮಂಗಳ ತಿಮರು ಪುಸ್ತಕದಲ್ಲಿಯೂ ಅಣ್ಣಪ್ಪ ಸ್ವಾಮಿ ದೈವವು ಕುಡುಮ (ಧರ್ಮಸ್ಥಳ) ದಿಂದ ಅಮ್ಟಾಡಿ ಅಕ್ಕೇರಿಪಾದೆಗೆ ಬಂದು ನೆಲೆ ನಿಂತು ಮುಂದಕ್ಕೆ ನೇಮೋತ್ಸವಕ್ಕಾಗಿ ಮಂಗ್ಲಿಮಾರ್ ಸ್ಥಳವನ್ನು ಆಯ್ಕೆ ಮಾಡಿದೆ ಎನ್ನುವ ಉಲ್ಲೇಖವಿದೆ. ದೈವದ ಪಾಡ್ದನದಲ್ಲೂ ಇದೇ ವಿಚಾರ ಉಲ್ಲೇಖವಾಗಿದೆ. ಆದ್ದರಿಂದ ಧ್ವನಿ ಮುದ್ರಣ ಸಂಸ್ಥೆಯವರು ಆಡಿಯೂ ತುಣುಕುವಿನಲ್ಲಿರುವ ತಪ್ಪು ಮಾಹಿತಿಯನ್ನು ಕೂಡಲೇ ತಡೆಹಿಡಿದು ಸತ್ಯಸಂಗತಿಯನ್ನು ಜನರಿಗೆ ತಿಳಿಸುವಂತೆ ಅವರು ಸಮಿತಿಯ ಪರವಾಗಿ ಆಗ್ರಹಿಸಿದರು.
ಸಮಿತಿಯ ಲೋಕೆಶ್ ಸುವರ್ಣ ಮಾತನಾಡಿ ಈ ಆಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವುದರಿಂದ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ. ತಪ್ಪು ಮಾಹಿತಿ ಅಥವಾ ತಿಳುವಳಿಕೆಯ ಕೊರತೆಯಂದ ಧ್ವನಿ ಸುರುಳಿ ತಯಾರಿಕ ಸಂಸ್ಥೆ ಈ ಪ್ರಮಾದವನ್ನು ಮಾಡಿರಬಹುದು ಈ ಬಗ್ಗೆ ಸಂಸ್ಥೆಗೆ ಪತ್ರ ಬರೆಯಲಾಗಿದ್ದು ತಪ್ಪು ಸರಿಪಡಿವಂತೆ ಒತ್ತಾಯಿಸಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಆರಾಧನ ಸಮಿತಿ ಸದಸ್ಯರಾದ ಎಲೆದಾರಬಾವಾ ನರಸಿಂಹ ಹೊಳ್ಳ, ಕೈಯೋಳಿಮಾರ್ ಉಮೇಶ್ ಶೆಟ್ಟಿ, ಲಕ್ಷ್ಮಣ ಶೆಟ್ಟಿ, ಭುವನೇಶ್ ಪಚ್ಚಿನಡ್ಕ, ಪುಷ್ಪರಾಜ್ ಶೆಟ್ಟಿ ಬಡಾಜೆ, ಅಣ್ಣು ಪೂಜಾರಿ ಹೊಸಹೊಕ್ಲು, ಜಯಂತ ಕೆ., ಪ್ರಭಾಕರ ಆಳ್ವ ಬಡಾಜೆ, ರಾಮಚಂದ್ರ ಕಾಯರ್ಮಾರ್, ಪ್ರಶಾಂತ್ ಕೆಂಪುಗುಡ್ಡೆ, ವಿಜಯ ಅಮಾಡಿ, ಬಸಂತ ಕುಮಾರ್ ಕಾಯರ್ಮಾರ್, ಯತೀಶ್ ಕರ್ಕೇರಾ, ದೇವದಾಸ್ ಕೆಂಪುಗುಡ್ಡೆ, ವಿಶ್ವನಾಥ ಕೆಂಪುಗುಡ್ಡೆ, ರಾಮಣ್ಣ ಪೂಜಾರಿ ಕಂಗಿತ್ಲು, ಚಂದ್ರಶೇಖರ ಶೆಟ್ಟಿ ಮತ್ತಿತರರು ಹಾಜರಿದ್ದರು.