ಬಂಟ್ವಾಳ: ಶಂಭೂರು ಶಾಲೆ ಅಂಗನವಾಡಿ ಕೇಂದ್ರದಲ್ಲಿ ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮ ನಡೆಯಿತು. ಸಮನ್ವಯ ಸಮಿತಿ ಉದಯ ಕುಮಾರ್ ಶಾಂತಿಲ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಹಾಗೂ ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶಾಲಿನಿಯವರು ಪೌಷ್ಠಿಕಾಂಶದ ಅಗತ್ಯ ಮತ್ತು ಕೊರತೆಯಿಂದಾಗುವ ಸಮಸ್ಯೆಯ ಕುರಿತು ಮಾಹಿತಿ ನೀಡಿದರು.
ತಾಲೂಕು ಸರಕಾರಿ ಆಸ್ಪತ್ರೆಯ ಆರೋಗ್ಯ ಮಿತ್ರ ಉಷಾ ಅವರು ಆಯುಷ್ಮಾನ್ ಭಾರತ್ ಬಗ್ಗೆ ಮಾಹಿತಿ ನೀಡಿದರು. ಸವಿತಾ ಶಂಬೂರು ಮಾತನಾಡಿ ಅನಾರೋಗ್ಯಕ್ಕೆ ಕಾರಣಗಳು ಪೋಷಕಾಂಶ ಅವಶ್ಯಕತೆಯ ಬಗ್ಗೆ ವಿವರಣೆ ನೀಡಿದರು. ಶಂಭೂರು ಶಾಲೆ ಅಂಗನವಾಡಿ ಕೇಂದ್ರದ ಸ್ತ್ರೀ ಶಕ್ತಿ ಸದಸ್ಯರ,ು ಮಕ್ಕಳ ಪೋಷಕರು, ವಿವಿಧ ಪೌಷ್ಠಿಕ ಖಾದ್ಯಗಳನ್ನು ತಯಾರಿಸಿ ತಂದಿದ್ದರು.
ತಾ.ಪಂ ಸದಸ್ಯೆ ಗಾಯತ್ರಿ ರವೀಂದ್ರ, ಗ್ರಾ.ಪಂ ಸದಸ್ಯರಾದ ಹೇಮಲತಾ , ದಿವಾಕರ , ಕಿಶೋರ್ ಶೆಟ್ಟಿ ಹಾಗೂ ಹೇಮಲತಾ ಪ್ರಮೀಳ ಉಪಸ್ಥಿತರಿದ್ದರು. ಪ್ರೇಮಾ ಸ್ವಾಗತಿಸಿ , ಸುನೀತಾ ವಂದಿಸಿದರು.