ಬಂಟ್ವಾಳ: ಸ್ಪರ್ಧಾತ್ಮಕ ಯುಗದಲ್ಲಿ ಆಂಗ್ಲಭಾಷಾ ಜ್ಞಾನ ಅನಿವಾರ್ಯವಾಗಿದೆ. ಭಾಷಾ ಜ್ಞಾನದ ಕೊರತೆಯಿಂದ ಆನೇಕರು ಉತ್ತಮ ಅವಕಾಶದಿಂದ ವಂಚಿತರಾಗಿದ್ದಾರೆ. ಇಂಗ್ಲಿಷ್ ಭಾಷೆಯನ್ನು ಪ್ರತಿಯೊಬ್ಬರು ಕಲಿಯಬೇಕು
ಎಂದು ಉಜಿರೆ ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜು ಆಂಗ್ಲಭಾಷಾ ಉಪನ್ಯಾಸಕಿ ನಿಹಾರಿಕ ಅಭಿಜಿತ್ ಹೇಳಿದರು. ಅವರು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಪದವಿ ಪೂರ್ವ ಕಾಲೇಜಿನ ಆಂಗ್ಲಭಾಷಾ ಸಂಘದ ಆಶ್ರಯದಲ್ಲಿ
ನಡೆದ ದೈನಂದಿನ ಬದುಕಿನಲ್ಲಿ ಆಂಗ್ಲ ಭಾಷೆಯ ಮಹತ್ವ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರಿಣಾಮಕಾರಿ ಸಂವಹನದಲ್ಲಿ ಆತ್ಮವಿಶ್ವಾಸದ ಜತೆ ಹಾವಭಾವ ಬಹುಮುಖ್ಯ ಪಾತ್ರವಹಿಸುತ್ತದೆ.

15BTW2

ದೈನಂದಿನ ಬದುಕಿನಲ್ಲಿ ಆಂಗ್ಲಭಾಷೆ ನಮಗೆ ನಾಗರಿಕತೆಯನ್ನು ಕಲಿಸಿದೆ. ಸರಳ ಭಾಷೆಯಾಗಿರುವ ಆಂಗ್ಲ ಭಾಷೆಯನ್ನು ಕಲಿತು ಅದರಲ್ಲಿ ಪರಿಣತಿ ಹೊಂದಿದರೆ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು. ಬಂಟ್ವಾಳ ಎಸ್.ವಿ.ಎಸ್. ಪ.ಪೂ. ಕಾಲೇಜು ಪ್ರಾಂಶುಪಾಲೆ ಶಶಿಕಲಾ ಕೆ. ಅಧ್ಯಕ್ಷತೆ ವಹಿಸಿದರು. ಆಂಗ್ಲಭಾಷಾ ಸಂಘದ ಸಲಹೆಗಾರೆ ಪ್ರಭಾವತಿ ಎಸ್. ಸಹಕರಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಸಂಧ್ಯಾ ಮತ್ತು ಸುದರ್ಶನ್ ಬಿ. ಉಪಸ್ಥಿತರಿದ್ದರು.ಆಂಗ್ಲಭಾಷಾ ಸಂಘದ ಅಧ್ಯಕ್ಷೆ ಹಾಗೂ ಆಂಗ್ಲಭಾಷಾ ಉಪನ್ಯಾಸಕಿ ಅನಿತಾ ಜೇಕಬ್ ಅತಿಥಿ ಪರಿಚಯ ಮಾಡಿದರು. ಸಂಘದ ಕಾರ್ಯದರ್ಶಿ ಅಫ್ರೀಮಾ ಆಯಿಶಾ ಸ್ವಾಗತಿಸಿ, ಜತೆಕಾರ್ಯದರ್ಶಿ ಮಧುಶ್ರೀ ವಂದಿಸಿದರು. ವಿದ್ಯಾರ್ಥಿನಿ ಕುಶಿ ಎ. ಚೌಟ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *