ಬಂಟ್ವಾಳ: ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಏಕದಿನ ಶಿಬಿರವನ್ನು ಪುಟ್ಟ ಎಂ.ಕೆ ಮಲ್ಲದಪಾಲು ಮಲವಂತಿಗೆ ದಿಡುಪೆ ಇವರ ನೆರೆ ಪೀಡಿತ ಪ್ರದೇಶದಲ್ಲಿ ನಡೆಸಲಾಯಿತು. ನಮ್ಮ ನಡಿಗೆ ನೆರೆ ಸಂತ್ರಸ್ಥರೆಡೆಗೆ ಎಂಬ ಘೋಷವಾಕ್ಯದೊಂದಿಗೆ ೫೦ ಮಂದಿ ಎನ್. ಎಸ್.ಎನ್ ಸ್ವಯಂ ಸೇವಕ,ಸೇವಕಿಯರು ಒಂದು ದಿನದ ಶ್ರಮದಾನವನ್ನು ನಡೆಸಿಕೊಟ್ಟರು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಪ್ರೊ. ರೋನಾಲ್ಡ್ ಪ್ರವೀಣ್ ಕೊರೆಯ, ಡಾ.ಮೇರಿ ಎಂ.ಜೆ ಹಾಗೂ ಪ್ರೊ.ಸುರೇಶ್ ಆಂಗ್ಲ ಭಾಷಾ ಉಪನ್ಯಾಸಕರು, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಸ್ಥಳೀಯರಾದ ಉಮೇಶ್, ದಿನೇಶ್ ಗೌಡ, ಮೊದಲಾದವರು ಉಪಸ್ಥಿತರಿದ್ದರು.
