ಕೈಕಂಬ: ಕೊಳತ್ತಮಜಲು ಬಿಲ್ಲವರ ಸಮಾಜ ಸೇವಾ ಸಂಘ ಪಂಚಗ್ರಾಮದಲ್ಲಿ 165ನೇ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆಯ ಪ್ರಯುಕ್ತ ಪಂಚಗ್ರಾಮದ ಗುರು ಮಂದಿರದಲ್ಲಿ ಸೆ.21ರಂದು ಶನಿವಾರ ದಿಂದ ಬಾನಾವಾರ ಬೆಳಗ್ಗೆ 8 ಗಂಟೆಯವರೆಗೆ ನಾನಾ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ ನಡೆಯಿತು. ಪುರೋಹಿತ ಲೋಕೇಶ್ ಶಾಂತಿ ಪೂಜಾ ವಿಧಿವಿದಾನಗಳನ್ನು ನೆರವೇರಿಸಿದರು.
ಬಡಗಬೆಳ್ಳೂರು ಪಂಚಗ್ರಾಮದ ಸದಸ್ಯರಿಂದ ಭಜನಾ ಮಂಗಲೋತ್ಸವ ನಡೆಯಿತು. ಬಿಲ್ಲವ ಸಮಾಜ ಪಂಚಗ್ರಾಮದ ಅಧ್ಯಕ್ಷರು , ಸದಸ್ಯರು, ಮಹಿಳಾ ಸದಸ್ಯೆಯರು ಭಜನೋತ್ಸವದಲ್ಲಿ ಪಾಲ್ಗೊಂಡಿದ್ದರು.