ಬಂಟ್ವಾಳ.:    ಸರ್ವ ಶಿಕ್ಷಾ ಅಭಿಯಾನದ ಪ್ರೌಢಶಾಲಾ ಶಿಕ್ಷಕರು (ಟಿಜಿಟಿ) ಹಲವು ಸಮಸ್ಯೆಗಳನ್ನು ಕಳೆದ 14 ವರ್ಷಗಳಿಂದ ಅನುಭವಿಸುತ್ತಿದ್ದು, ಇವನ್ನು ಬಗೆಹರಿಸಲು ಹಾಗೂ ನೇಮಕಾತಿಯನ್ನು ಜಿಲ್ಲೆಯೊಳಗೇ ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ತೆರಳಿದ ಶಿಕ್ಷಕರ ನಿಯೋಗಕ್ಕೆ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಭರವಸೆ ನೀಡಿದ್ದಾರೆ.

IMG-20191010-WA0074

ಬಂಟ್ವಾಳ ಶಾಸಕ ರಾಜೇಶ್ ಯು. ನಾಯ್ಕ್ ನೇತೃತ್ವದಲ್ಲಿ ಶಿಕ್ಷಕರ ಸಂಘದ ಪದಾಧಿಕಾರಿಗಳ ನಿಯೋಗ ಸಚಿವರನ್ನು ಭೇಟಿಯಾಗಿ ಸಮಸ್ಯೆಗಳ ಕುರಿತು ಗಮನಕ್ಕೆ ತಂದಿದ್ದರು. ಸಂಘದ ಬಂಟ್ವಾಳ ಘಟಕದ ಅಧ್ಯಕ್ಷರಾದ  ಶ್ರೀಮತಿ ಕೆ,  ಕಾರ್ಯದರ್ಶಿ ಡಿಕ್ಸನ್ ಡಿಮೆಲ್ಲೋ, ಕೋಶಾಧಿಕಾರಿ ಪುಷ್ಪಾವತಿ, ಸದಸ್ಯರುಗಳಾದ ಸುಧಾಕರ ಶೆಟ್ಟಿ, ಹರೀಶ ಮೂಲ್ಯ, ಶಶಿಕಾಂತ, ಸತೀಶ್ ಕುಮಾರ್ ಉಪಸ್ಥಿತರಿದ್ದು, ಟಿಜಿಟಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು. ಸುಮಾರು ಹದಿನಾಲ್ಕು ವರ್ಷಗಳಿಂದ ಟಿಜಿಟಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಸಂಪೂರ್ಣವಾಗಿ ಬಗೆಹರಿಸುವುದರ ಜೊತೆಗೆ  ನೇಮಕಾತಿ ಜಿಲ್ಲೆಯೊಳಗೇ ಉಳಿಸಿಕೊಡುವ ಬಗ್ಗೆಯೂ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಚಿವರು ಭರವಸೆ ನೀಡಿದರು. ಕಳೆದ ಒಂದೂವರೆ ವರ್ಷಗಳಿಂದ ಸರ್ವಶಿಕ್ಷಾ ಅಭಿಯಾನದ ಶಿಕ್ಷಕರು ಎದುರಿಸುತ್ತಿರುವ ವೇತನ ವಿಳಂಬದ ಸಮಸ್ಯೆ ಬಗೆಹರಿಸುವುದಾಗಿ ಅವರು ಹೇಳಿದರು.

 

By suddi9

Leave a Reply

Your email address will not be published. Required fields are marked *