ಬಂಟ್ವಾಳ : ಪುರಸಭಾ ವ್ಯಾಪ್ತಿಯ ಬಂಟ್ವಾಳ ಕಸ್ಬಾ 1ನೇ ವಾಡ್ ನ ಕಾರಂಬಡೆ ಶ್ರೀ ಮಹಾಮಾಯಿ ಕ್ಷೇತ್ರದ ಪುನರ್ ನಿರ್ಮಾಣದ ಸುಸಂದರ್ಭದಲ್ಲಿ ದೇವಸ್ಥಾನಕ್ಕೆ ಹೋಗುವ ರಸ್ತೆಗೆ ಪುರಸಭೆಯ 14ನೇ ಹಣಕಾಸಿನ
ಯೋಜನೆಯಡಿಯಲ್ಲಿ ರೂ.8ಲಕ್ಷ ವೆಚ್ಚದ ಕಾಂಕ್ರಿಟೀಕರಣದ ಶಿಲಾನ್ಯಾಸವನ್ನು ಪುರಸಭಾ ಸದಸ್ಯ ವಾಸು ಪೂಜಾರಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಹರೀಶ್ ಕೋಟ್ಯಾನ್ ಮಡಿವಾಳಬೆಟ್ಟು , ಗುತ್ತಿಗೆದಾರ ವಸಂತ್ ಶೆಟ್ಟಿ, ಅರುಣ್ ಕುಮಾರ್ ಕಾರಂಬಡೆ, ಜಯಶಂಕರ್ ಕಾನ್ಸಾಲೆ, ಯಶವಂತ ಕಾರಂಬಡೆ, ಸುಮಿತ್ರಾ , ಪ್ರೇಮಾ ಅರುಣ್, ರಮೇಶ್
ದರ್ಬೆ, ಸುಭೀಕ್ಷಾ ಮತ್ತಿತರರು ಉಪಸ್ಥಿತರಿದ್ದರು.
