ಬಂಟ್ವಾಳ: ಗ್ರಾಮ‌ ಪಂಚಾಯತ್ ಆಡಳಿತದಲ್ಲಿ ಮಹಿಳಾ ಜನಪ್ರತಿನಿಧಿಯನ್ನು ಅವಮಾನಿಸಲಾಗುತ್ತದೆ ಎಂದು  ನರಿಕೊಂಬು ಗ್ರಾ.ಪಂ.ಉಪಾಧ್ಯಕ್ಷೆ ರಾಜೀವಿ ಕೃಷ್ಣಪ್ಪ ಪೂಜಾರಿ ಅವರು, ಗ್ರಾ.ಪಂ. ಅಧ್ಯಕ್ಷ ಹಾಗೂ ಪ್ರಬಾರ ಪಿಡಿಓ ವಿರುದ್ಧ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ಸಲ್ಲಿಸಿದ್ದಾರೆ.‌  ನರಿಕೊಂಬು ಗ್ರಾ.ಪಂ. ಕಾರ್ಯಾಲಯದಲ್ಲಿದ್ದ ಉಪಾಧ್ಯಕ್ಷರ ಕುರ್ಚಿಯನ್ನು ತೆರವು ಮಾಡಲಾಗಿದೆ. ತನ್ನ ಹೆಸರು ಹಾಗೂ ಹುದ್ದೆ ಇರುವ ನಾಮಫಲಕವನ್ನು ಕೂಡ ತೆಗೆದು ಅವಮಾನ ಮಾಡಲಾಗಿದೆ ಎಂದು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ರಾಜೀವಿ ಕೃಷ್ಣಪ್ಪ ಪೂಜಾರಿ ತಾ.ಪಂ.ಇಓಯವರಿಗೆ ಸಲ್ಲಿಸಿರುವ ಲಿಖಿತ ದೂರಿನಲ್ಲಿ ಆರೋಪಿಸಿದ್ದಾರೆ.

Panchayat-and-Municipalities copy

ತಾನೊಬ್ಬ ಮಹಿಳಾ ಜನಪ್ರತಿನಿಧಿ ಎನ್ನುವ ಕಾರಣಕ್ಕಾಗಿ ಪಂಚಾಯತಿ ಅಧ್ಯಕ್ಷರು ಹಾಗೂ ಸ್ಥಳೀಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ನನ್ನನ್ನು ಕಡೆಗಣಿಸಿದ್ದಾರೆ. ಈ ಘಟನೆಯ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಬೇಕಾಗಿ ನ್ಯಾಯ ಒದಗಿಸಬೇಕಾಗಿ ಕಾರ್ಯ ನಿರ್ವಹಕಾಧಿಕಾರಿಯವರಿಗೆ ಸಲ್ಲಿಸಲಾದ ದೂರಿನಲ್ಲಿ ರಾಜೀವಿ ಕೃಷ್ಣಪ್ಪ ಪೂಜಾರಿ ಅವರು ಒತ್ತಾಯಿಸಿದ್ದಾರೆ.  ಉಪಾಧ್ಯಕ್ಷ ಸ್ಥಾನಕ್ಕೆ ಅವಮಾನ ಮಾಡಿರುವ ಹಿನ್ನೆಲೆಯಲ್ಲಿ ತನಗೆ ಪ್ರತ್ಯೇಕ ಕೊಠಡಿ ಕಲ್ಪಿಸಬೇಕೆಂದು ಆಗ್ರಹಿಸಿರುವ ಉಪಾಧ್ಯಕ್ಷೆ ರಾಜೀವಿಯವರು, ತೆರವುಗೊಳಿಸಲಾದ ಕುರ್ಚಿ ಹಾಗೂ ನಾಮಫಲಕ ಅಳವಡಿಸುವಂತೆ ಮನವಿ ಮಾಡಿದ್ದಾರೆ.

ಉಪಾಧ್ಯಕ್ಷರು ನೀಡಿದ ಮನವಿಗೆ ಸ್ಪಂದಿರುವ ತಾ.ಪಂ. ಕಾರ್ಯ ನಿರ್ವಹಕಾಧಿಕಾರಿ ರಾಜಣ್ಣ ಅವರು, ಈ ಬಗ್ಗೆ ಪಿಡಿಓ ಯವರಿಗೆ ನೋಟೀಸ್ ಕಳುಹಿಸಲಾಗುವುದು. ಉಪಾಧ್ಯಕ್ಷರಿಗೆ ಪ್ರತ್ಯೇಕ ಕೊಠಡಿ ಕಲ್ಪಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದಾಗಿ ತಿಳಿಸಿದ್ದಾರೆ. ‌ ಕಳೆದ ಸುಮಾರು 25ವರ್ಷಗಳಲ್ಲಿ ಇದೇ ಮೊದಲ ಬಾರಿ ಎಂಬಂತೆ ಪಂಚಾಯತ್ ಸಾಮಾನ್ಯ ಸದಸ್ಯರ ಸಭೆಯನ್ನು ರದ್ದು ಮಾಡಲಾಗಿದೆ. ‌ನರಿಕೊಂಬು ಗ್ರಾ.ಪಂ. ಸಾಮಾನ್ಯ ಸದಸ್ಯರ ಸಭೆಯನ್ನು ಅ.22ರಂದು ಕರೆಯಲಾಗಿದ್ದು, ಅಧ್ಯಕ್ಷರು ಗೈರು ಹಾಜರಾಗಿದ್ದರು‌.  ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆಸಬೇಕೆನ್ನುವ ನಿಯಮ ಇದ್ದರೂ, ತನಗೆ ಅವಮಾನಿಸುವ ಏಕೈಕ ಉದ್ದೇಶದಿಂದ ಸಭೆಯನ್ನು ಏಕಾಏಕಿ ರದ್ದು ಮಾಡಲಾಗಿದೆ ಎಂದು ಉಪಾಧ್ಯಕ್ಷೆ ರಾಜೀವಿ ಆರೋಪಿಸಿದ್ದಾರೆ.
‌

By suddi9

Leave a Reply

Your email address will not be published. Required fields are marked *