ಬಂಟ್ವಾಳ : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸಿ.ಬಿಎಸ್.ಇ ಶಾಲೆಗಳ ಒಕ್ಕೂಟವು ಮಂಗಳೂರಿನ ಸೈಂಟ್ ಆಗ್ನೆಸ್ ಶಾಲೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ತ್ರೋಬಾಲ್ ಸ್ಪರ್ಧೆಯಲ್ಲಿ 17ರ ಒಳಗಿನ ಬಾಲಕಿಯರ ವಿಭಾಗದಲ್ಲಿ ವಿದ್ಯಾಗಿರಿಯ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯರ ತಂಡವು ಸತತ ಎರಡನೇ ಬಾರಿಗೆ ಪ್ರಥಮ ಸ್ಥಾನ ಪಡೆದು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ತಂಡದ ನಾಯಕಿ ಅನಲ ಜೆ ಶೆಟ್ಟಿ ಆಲ್ರೌಂಡರ್ ಹಾಗೂ ಪೂರ್ಣಶ್ರೀ ಕೆ ಎಸ್ ಬೆಸ್ಟ್ ರಿಸೀವರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಶ್ರುತಿಕ ತರಬೇತಿ ನೀಡಿದ್ದರು. ವಿದ್ಯಾರ್ಥಿನಿಯರ ಸಾಧನೆಯನ್ನು ಶಾಲಾ ಪ್ರಾಂಶುಪಾಲೆ ಶ್ರೀಮತಿ ರಮಾಶಂಕರ್ ಸಿ, ಸಂಚಾಲಕರಾದ ಶ್ರೀ ಭಾಮೀ ವಿಠ್ಠಲದಾಸ್ ಶೆಣೈ ಮುಕ್ತಕಂಠದಿಂದ ಪ್ರಶಂಸಿಸಿ ಶುಭ ಹಾರೈಸಿದ್ದಾರೆ. ಈ ಮೇಲಿನ ಸುದ್ದಿಯನ್ನು ಫೊಟೋ ಸಹಿತ ಪ್ರಕಟಿಸಬೇಕಾಗಿ ವಿನಂತಿ.