ಬಂಟ್ವಾಳ: ಮಾಜಿ ತಾ‌.ಪಂ.ಸದಸ್ಯ ,ಮುಖಂಡ ಸೋಮಪ್ಪ ಕೋಟ್ಯಾನ್ ತುಂಬೆ ಅವರ ಮನೆಯಲ್ಲಿ ಹಾಡುಹಗಲೇ ಲಕ್ಷಾಂತರ ರೂ. ಮೌಲ್ಯದ ನಗ- ನಗದು ಕಳವು ಮಾಡಿದ ಘಟನೆ ರಾ.ಹೆ.ಯ ಕೆಳಗಿನ ತುಂಬೆಯಲ್ಲಿ ನಡೆದಿದೆ.ಮನೆಯಲ್ಲಿ ಯಾರು ಇಲ್ಲದ ವೇಳೆ ಈ ಕಳ್ಳತನ ನಡೆದಿದೆ.  ಮನೆಯ  ಹಿಂಬದಿಯ ಬಾಗಿಲು ಮುರಿದು ಒಳ ಪ್ರವೇಶಿಸಿದ  ಕಳ್ಳರು ಕಪಾಟಿನಲ್ಲಿಟ್ಟಿದ್ದ

18-56-36-IMG-20191117-WA0035

12.92 600 ಲಕ್ಷ ರೂ ಬೆಲೆ ಬಾಳುವ ಚಿನ್ನಾಭರಣ, 15 ಸಾವಿರ ನಗದು ಕಳವುಗೈದು  ಪರಾರಿಯಾಗಿದ್ದಾರೆ.ಮಧ್ಯಾಹ್ನ. 11.30 ರಿಂದ 1 ಗಂಟೆಯ ಮಧ್ಯೆ ಈ  ಕಳವು ಕೃತ್ಯ ನಡೆದಿರಬೇಕೆಂದು ಶಂಕಿಸಲಾಗಿದೆ. ಈ ಬಗ್ಗೆ  ಬಂಟ್ವಾಳ
ಮನೆಮಂದಿ ಎಲ್ಲರೂ ಕಾರ್ಯಕ್ರಮ ಕ್ಕೆಂದು ಅಲ್ಲಿಪಾದೆಗೆ ತೆರಳಿದ್ದರೆ,ಸೋಮಪ್ಪ ಕೋಟ್ಯಾನ್ ಅವರ ಸೊಸೆ ಕುಟುಂಬದ ನಾಗ ತಂಬಿಲ ಕಾರ್ಯಕ್ರಮಕ್ಕೆ ಹೋಗಿದ್ದರು. ಕಾರ್ಯ ಕ್ರಮ ಮುಗಿಸಿ ಮಧ್ಯಾಹ್ನ  ಮನೆಗೆ ಬಂದಾಗ
ಹಿಂಬದಿಯ ಬಾಗಿಲಿನ ಚಿಲಕ ತೆರೆದಿರುವುದು ಕಂಡು ಬಂತು. ಅನುಮಾನದಿಂದ ಕೋಣೆಯೊಳಗೆ ಹೋಗಿ ನೋಡಿದಾಗ ಕಳವು ನಡೆದಿರುವುದು ಬಯಲಿಗೆ ಬಂದಿದೆ.   ಬಳಿಕ ಅವರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.ಸುದ್ದಿ ತಿಳಿದ. ಎ.ಎಸ್.ಪಿ.ಸೈದುಲು ಅಡಾವತ್ ,  ಬಂಟ್ವಾಳ ಗ್ರಾಮಾಂತರ ಠಾಣಾ  ಎಸ್ ಐ ಪ್ರಸನ್ನ ,ಸಿಐ.ಟಿ.ಡಿ.ನಾಗರಾಜ್ ಮತ್ತವರ ಸಿಬಂದಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರನ್ನು  ಕರೆಸಲಾಗಿದೆ.ಈ  ಬಗ್ಗೆ   ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದ್ದು,ಮುಂದಿನ ತನಿಖೆ ನಡೆಯುತ್ತಿದೆ.

 

By suddi9

Leave a Reply

Your email address will not be published. Required fields are marked *