ಬಂಟ್ವಾಳ: ತಾಲೂಕಿನ ಕರೋಪಾಡಿ ಗ್ರಾಮದ ಒಡಿಯೂರು ಎಂಬಲ್ಲಿ ಗುಡ್ಡಕುಸಿತದಿಂದ ಮೃತಪಟ್ಟ ಮೂವರು ಕಾರ್ಮಿಕರಿಗೆ ಪರಿಹಾರ ಒದಗಿಸುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರವರಿಗೆ ಶಾಸಕದ್ವಯರು ಬೆಳ್ತಂಗಡಿಯ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮತ್ತು ಪುತ್ತೂರು ಶಾಸಕ ಸಂಜೀವ ಮಠಂದೂರುರವರು ಮುಖ್ಯಮಂತ್ರಿಯವರಲ್ಲಿ ಮಾಡಿದ ಮನವಿಗೆ ಸ್ಪಂಧಿಸಿದ ಮುಖ್ಯಮಂತ್ರಿಗಳು ಮೃತಪಟ್ಟವರಿಗೆ ತಲಾ 3 ಲಕ್ಷದಂತೆ ಗಾಯಾಳುವಿಗೆ 1ಲಕ್ಷ ಪರಿಹಾರ ಘೋಷಿಸಿ ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು.