ಬಂಟ್ವಾಳ: ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದಲ್ಲಿ ಹೊನಲು ಬೆಳಕಿನ ವಾರ್ಷಿಕ ಕ್ರೀಡೋತ್ಸವವು ಡಿ.15 ರಂದು ಸಂಜೆ 6 ಗಂಟೆಯಿಂದ ನಡೆಯಲಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಡಾ.ಪ್ರಭಾಕರ ಭಟ್ ಅವರು ಹೇಳಿದ್ದಾರೆ.

ಗುರುವಾರ ಸಂಜೆ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರ ದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವ ರಾಷ್ಟ್ರೀಯ ವಿಚಾರಧಾರೆಗಳನ್ನು ಬೋಧಿಸುತ್ತಿರುವ ಸಂಸ್ಥೆಯ ಶಿಶುಮಂದಿರದಿಂದ ಪದವಿ ವಿದ್ಯಾರ್ಥಿಗಳವರೆಗೆ 3399 ಪ್ರತಿಭೆಗಳ ಬೃಹತ್ ಸಂಗಮ ಇಲ್ಲಿ ನಡೆಯಲಿದ್ದು, ಇವರಲ್ಲಿ ಸುಮಾರು 40ರಷ್ಟು ಮಂದಿ ವಿಶೇಷಚೇತನ ಮಕ್ಕಳು ಪಾಲ್ಗೊಳ್ಳಲಿದ್ದಾರೆ ಎಂದರು. ಸುಮಾರು 3 ತಾಸುಗಳ ಕಾಲ ನಿರಂತರವಾಗಿ ನಡೆಯುವ ಕ್ರೀಡೋತ್ಸವದಲ್ಲಿ ವಿದ್ಯಾರ್ಥಿಗಳಿಂದ 20 ವಿವಿಧ ಪ್ರದರ್ಶನಗಳು ಅನಾವರಣಗೊಳ್ಳಲಿದ್ದು, ಚಂದ್ರಯಾನ 2 ಉಡಾವಣೆ, ಮಾಜಿ ಉಪಪ್ರದಾನಿ ಎಲ್.ಕೆ.ಆಡ್ವಾಣಿಯವರ ಆಯೋಧ್ಯೆ ರಥಯಾತ್ರೆ,ಕರಸೇವಕರು ಆಯೋಧ್ಯಾ ನಡೆಸಿದ ಹೋರಾಟ ಹಾಗೂ ರಾಮಮಂದಿರದ ಚಿತ್ರಣಗಳು ಈ ಬಾರಿ ವಿಶೇಷವಾಗಿ ಮೂಡಿಬರಲಿದೆ ಎಂದರು.
ಪುದುಚೇರಿಯ ಲಿಪ್ಟಿನೆಂಟ್ ಗವರ್ನರ್ ಡಾ ಕಿರಣ್ ಬೇಡಿ, ಕೇಂದ್ರದ ಮಂತ್ರಿಗಳಾದ ಸುರೇಶ್ ಅಂಗಡಿ, ಸದಾನಂದ ಗೌಡ,ರಾಜ್ಯದ ಸಚಿವರುಗಳಾದ ಬಸವರಾಜ್ ಬೊಮ್ಮಾಯಿ, ಶಶಿಕಲಾ ಜೊಲ್ಲೆ,ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದರಾದ ನಳಿನ್ ಕುಮಾರ್ ಕಟೀಲ್, ಕರಡಿಸಂಗಣ್ಣ, ಸಹಿತ ರಾಜ್ಯದ ಅನೇಕ ಶಾಸಕರು, ಮಾಜಿ ಶಾಸಕರು, ಐ.ಪಿ.ಎಸ್. ಅಧಿಕಾರಿಗಳು, ಸಿನೆಮಾ ನಟರು ಹಾಗು ಗಣ್ಯರು ಈ ಕ್ರೀಡೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದ ಅವರು 3 ಸಾವಿರ ಮಂದಿ ಕುಳಿತು ನೋಡಬಹುದಾದ ಗ್ಯಾಲರಿ ನಿರ್ಮಿಸಲಾಗಿದೆ ಎಂದು ವಿವರಿಸಿದರು.
73 ಮಕ್ಕಳಿಂದ 1980 ರಲ್ಲಿ ಪ್ರಾರಂ
ಸರಕಾರಿ ಶಾಲೆ ಉಳಿಸುವ ಕಾರ್ಯ ಆಗಬೇಕು:
ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಆಂಗ್ಲ ಭಾಷೆ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಅತ್ತ ಕನ್ನಡವೂ ಅಲ್ಲದ, ಇತ್ತ ಇಂಗ್ಲೀಷೂ ಅಲ್ಲದ ಸ್ಥಿತಿಗೆ ಕೊಂಡೊಯ್ಯುವ ಬದಲು ಮಾತೃಭಾಷೆ ಶಿಕ್ಷಣ ನೀಡುವ ಮೂಲಕ ಸರಕಾರಿ ಶಾಲೆ ಉಳಿಸುವ ಕಾರ್ಯ ನಡೆಸಬೇಕು ಎಂದು ಈ ಸಂದರ್ಭ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಡಾ. ಪ್ರಭಾಕರ ಭಟ್ ಉತ್ತರಿಸಿದರು. ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಕೊನೇ ಮೊಳೆಯನ್ನು ಸಮ್ಮಿಶ್ರ ಸರಕಾರ ಇದ್ದಾಗ ಹೊಡೆಯಲಾಗಿತ್ತು ಎಂದ ಭಟ್, ನಮಗೆ ಇಂಟರ್ ನ್ಯಾಶನಲ್ ಸ್ಕೂಲ್ ಬೇಡ, ನ್ಯಾಶನಲ್ ಸ್ಕೂಲ್ ಮಾತೃಭಾಷಾ ಶಿಕ್ಷಣ ನೀಡುವಂತಾಗಬೇಕು, ಜೀವನ ಮೌಲ್ಯಗಳನ್ನು ರಾಷ್ಟ್ರೀಯತೆಯನ್ನು ಬೋಧಿಸುವ ಕನ್ನಡ ಶಾಲೆ ನಮ್ಮದು. ವಿವೇಕಾನಂದ ವಿದ್ಯಾವರ್ಧಕ ಸಂಘದ ಸಂಸ್ಥೆಗಳಲ್ಲಿ 4750 ಮಂದಿ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದಾರೆ. ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಆಂಗ್ಲ ಭಾಷಣ ಸ್ಪರ್ಧೆಗಳಲ್ಲೂ ಅವರು ಪ್ರಥಮ ಬಹುಮಾನ ಪಡೆಯಲು ಶಕ್ತರಾಗಿದ್ದಾರೆ ಎಂದರು.