ಬಂಟ್ವಾಳ: ಬಂಟ್ವಾಳ ರಿಕ್ಷಾ ಚಾಲಕ-ಮಾಲಕರ ಸಂಘದ ನೂತನ ಅಧ್ಯಕ್ಷರಾಗಿ ಸತೀಶ್ ಭಂಡಾರಿಬೆಟ್ಟು ಅವರು ಆಯ್ಕೆಯಾಗಿದ್ದಾರೆ. ಬಿ.ಸಿ.ರೋಡಿನ ಲಯನ್ಸ್ ಕ್ಲಬ್ ನಲ್ಲಿ ಅಧ್ಯಕ್ಷ ವಸಂತ ಮಣಿಹಳ್ಳ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ.
ಸಂಘದ ಉಪಾಧ್ಯಕ್ಷರಾಗಿ ವಿಶ್ವನಾಥ ಕುಕ್ಕಾಜೆ, ಸುಧಾಕರ ಕಲ್ಪನೆ, ಉಮಾಶಂಕರ ಬಡ್ಡಕಟ್ಟೆ ,ಮಂಜುನಾಥ ಬಂಟ್ವಾಳ, ಗೋಪಾಲ ಪಾಣೆಮಂಗಳೂರು, ಮೋಹನ ಕಾಮಾಜೆ ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣಪ್ಪ, ಜೊತೆ ಕಾರ್ಯದರ್ಶಿಯಾಗಿ ರಮೇಶ, ಕೃಷ್ಣಪ್ಪ ಪಾಣೆಮಂಗಳೂರು, ಸಾಹುಲ್ ಬಿಸಿರೋಡ್ ಸತೀಶ ಮೆಲ್ಕಾರ್ ,ರವಿ ಕೋಟ್ಯಾನ್ ,ರೋಹಿತ ಬಂಟ್ವಾಳ ಸಂಘಟನಾ ಕಾರ್ಯದರ್ಶಿಗಳಾಗಿಮಂಜುನಾಥ, ಶಿವಚಂದ್ರ, ಗುರುವಪ್ಪ, ಹರೀಶ ಕುಲಾಲ್, ಲಕ್ಷ್ಮಣ,ಗುರುವಪ್ಪ ,ಕೋಶಾಧಿಕಾರಿಯಾಗಿರವಿ ಪಾಣೆಮಂಗಳೂರು ಹಾಗೂ ವಿವಿಧ ವಲಯದ ಪದಾಧಿಕಾರಿಗಳ ಅಯ್ಕೆ ನಡೆಯಿತು..