ಬಂಟ್ವಾಳ: ಆರ್ಯುವೇದ ಔಷಧೀಯ ಗುಣಗಳಿರುವ ಆಹಾರವನ್ನು ಸೇವಿಸಿದಾಗ ಆರೋಗ್ಯ ರಕ್ಷಣೆ ಪಡೆಯಲು ಸಾಧ್ಯ ಎಂದು ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಹೇಳಿದರು.
 ಬಂಟ್ವಾಳ ತಾ.ಪಂ.ನ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ದ..ಕ‌..ಜಿ .ಪಂ ಮತ್ತು ಆಯುಷ್  ಇಲಾಖೆ ವತಿಯಿಂದ ನಡೆದ ಆಯುಷ್ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಮನುಷ್ಯನ ಆರೋಗ್ಯದ ಬಗ್ಗೆ ಅತೀ ಹೆಚ್ಚು  ಕಾಳಜಿ ವಹಿಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ಅವರು ಹೇಳಿದರು. ‌
IMG-20191216-WA0025 (1)
ಆಯುಷ್ ಪದ್ದತಿಯ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಪಡೆದುಕೊಂಡು ಹೆಚ್ಚುಹೆಚ್ಚು ಆಯುಷ್ ನ ವಸ್ತುಗಳನ್ನು ದಿನ  ಬಳಕೆ ಮಾಡುವಂತೆ ಅವರು ತಿಳಿಸಿದರು.
 ಆಯುಷ್ ಇಲಾಖೆಯಲ್ಲಿನ ಸವಲತ್ತು, ಯೋಜನೆಗಳ ಬಗ್ಗೆ,  ಸಮಾಜದ ಕಟ್ಟಕಡೆಯ ವ್ಯಕ್ತಿ ಗಳಿಗ ಮಾಹಿತಿ ನೀಡುವ  ಕೆಲಸ ಅಂಗನವಾಡಿಯ ಕಾರ್ಯಕರ್ತರು, ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತೆಯರಿಂದಾಗಬೇಕು ಎಂದು ಅವರು ಹೇಳಿದರು.
ಉಪಾಧ್ಯಕ್ಷ ಅಬ್ಬಾಸ್ ಆಲಿ ಮಾತನಾಡಿ,
ಆಯುಷ್ ಪದ್ದತಿಯನ್ನು ಅನುಸರಿಸಿ, ಆಯುಷ್ಯ ಹೆಚ್ಚಿಸಲು ಮತ್ತು,  ಆರೋಗ್ಯವಂತರಾಗಲು ಸಾಧ್ಯ ಎಂದು ಅವರು ಹೇಳಿದರು.
ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ಕ್ಕೆ ಶುಭಹಾರೈಸಿದರು.
ವೇದಿಕೆಯಲ್ಲಿ ಹಿರಿಯ ಮೇಲ್ವಿಚಾರಕಿ ಭಾರತಿ  ಬೇಬಿ ಕುಂದರ್, ಮೇಲ್ವಿಚಾರಕಿ ಗುಣವತಿ , ಸಂಪನ್ನೂಲ ವ್ಯಕ್ತಿಗಳಾದ ಡಾ. ಅಜಿತ್ ನಾಥ್ ಇಂದ್ರ, ವಸುದಾ ಜೈನ್ , ಡಾ. ಶಿವಪ್ರಸಾದ್ ಶೆಟ್ಟಿ, ಇಲಾಖೆಯ ಸಿಬ್ಬಂದಿಗಳಾದ ಲಿಂಗಪ್ಪ, ಪ್ರವೀಣ್ ಕುಮಾರ್, ನಿತೇಶ್ ಉಪಸ್ಥಿತರಿದ್ದರು.
ಅಯುಷ್ ವೈದ್ಯಾಧಿಕಾರಿ ಡಾ! ಮಣಿಕಾರ್ಣಿಕ ಸ್ವಾಗತಿಸಿ, ವಂದಿಸಿದರು. ಶುಶ್ರೂಕಿ ಸುನಂದ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *