ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್ ಅವರು, ಬ್ರಹ್ಮಕಲಶ ಕಾರ್ಯವನ್ನು ಎಲ್ಲರೂ ಜತೆ ಸೇರಿ ನಡೆಸೋಣ ಎಂದು ತಿಳಿಸಿದರು. ಹಿರಿಯರಾದ ರಾಮಚಂದ್ರ ಗೌಡ ಮಣಿ ಅವರು ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರಾಮಚಂದ್ರ ಶೆಟ್ಟಿ ದಂಡೆ ಪ್ರಸ್ತಾವನೆಗೈದರು. ವೇದಿಕೆಯಲ್ಲಿ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ಗೌಡ ಕರೆಂಕಿ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಕರುಣೇಂದ್ರ ಪೂಜಾರಿ ಕೊಂಬ್ರಬೆಲು, ಗೌರವ ಸಲಹೆಗಾರ ಕೃಷ್ಣಪ್ಪ ನಾಯ್ಕ್ ಸೇಸಗುರಿ, ದೇವಪ್ಪ ಕುಲಾಲ್ ಪಂಜಿಕಲ್ಲು, ಉದ್ಯಮಿ ಜಗದೀಶ್ ಪೂಜಾರಿ, ದುರ್ಗಾ ಫ್ರೆಂಡ್ಸ್ ಅಧ್ಯಕ್ಷ ಭಾಸ್ಕರ ಕುಲಾಲ್, ದಡ್ಡಲಕಾಡು ಶ್ರೀ ಜಗದಾಂಭಿಕ ಕ್ಷೇತ್ರದ ಅಧ್ಯಕ್ಷ ಧರ್ಣಪ್ಪ ಪೂಜಾರಿ ರಾಮನಗರ, ಶಂಕರ ಶೆಟ್ಟಿ ನಡ್ಯೋಡಿಗುತ್ತು, ಪುರಸಭಾ ಸದಸ್ಯೆ ಮೀನಾಕ್ಷಿ, ಅಕ್ಷತಾ ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು. ಕ್ಷೇತ್ರದ ಸೇವಾ ಸಮಿತಿಯ ಉಪಾಧ್ಯಕ್ಷ ಪೂವಪ್ಪ ಮೆಂಡನ್ ಕರೆಂಕಿ ವಂದಿಸಿದರು. ಕೋಶಾಽಕಾರಿ ಆನಂದ ಕೆ.ಕ್ಷೇತ್ರಲಾಯಪಾಡಿ ಕಾರ್ಯಕ್ರಮ ನಿರ್ವಹಿಸಿದರು.
