ಬಂಟ್ವಾಳ:  ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವತಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ 2019 ರ ‘ ಜನ ಜಾಗೃತಿ ಅಭಿಯಾನ’ ದ ಕಾರ್ಯಗಾರವು ಬಿ.ಸಿ.ರೋಡಿನಲ್ಲಿರುವ ಪಕ್ಷದ ಕಛೇರಿಯಲ್ಲಿ ಶನಿವಾರ ಜರುಗಿತು.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಕಾರ್ಯಗಾರ ಉದ್ಗಾಟಿಸಿ ಮಾತನಾಡಿ, ಪೌರತ್ವ ಕಾಯ್ದೆಯ ಕುರಿತಾಗಿ ಜನರಲ್ಲಿರುವಂತ ತಪ್ಪು ಕಲ್ಪನೆಗಳನ್ನು ಹೋಗಾಲಾಡಿಸುವ ನಿಟ್ಟಿನಲ್ಲಿ  ಬಿ.ಜೆ.ಪಿ.ಕಾರ್ಯಕರ್ತರು ಮನೆ,ಮನೆಗೆ ತೆರಳಿ ಇದರ ವಾಸ್ತವಾಂಶವನ್ನು ತಿಳಿಹೇಳಲು ಕಟಿಬದ್ಧರಾಗಬೇಕಾಗಿದೆ ಎಂದು ಹೇಳಿದರು.

IMG-20200104-WA0056

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ  ವಿಧಾನ ಪರಿಷತ್ ನ ಮಾಜಿಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾಹಿತಿ ನೀಡಿ ಇದು ಯಾವುದೇ ಧರ್ಮಾಧರಿತವಾದ ಕಾನೂನು ಅಲ್ಲ,ಈ ಕಾಯ್ದೆಯಿಂದ ಭಾರತದ ಯಾವುದೇ ಧರ್ಮದ ನಾಗರಿಕರಿಗೂ ತೊಂದರೆ ಆಗುವುದಿಲ್ಲ ಮತ್ತು ಯಾರಿಂದಲೂ ಪೌರತ್ವ ಕಿತ್ತು ಕೊಳ್ಳುವ ಕಾನೂನು ಕೂಡ ಅಲ್ಲ. ಇದು ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಕಾನೂನು ಆಗಿದೆ ಎಂದು ತಿಳಿಸಿದರು.

IMG-20200104-WA0079
ರಾಜ್ಯ ಸಹವಕ್ತಾರೆ ಸುಲೋಚನ ಜಿ.ಕೆ ಭಟ್ ಅವರು ಜನ ಜಾಗೃತಿಯ ಮುಂದಿನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕ್ಷೇತ್ರ ಸಮಿತಿಯ ಅಧ್ಯಕ್ಷ ಬಿ. ದೇವದಾಸದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ,ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ ಪೂಜಾರಿ, ತಾಲೂಕು ಪಂಚಾಯತ್ ಸದಸ್ಯರಾದ ಪ್ರಭಾಕರ ಪ್ರಭು, ರಮೇಶ್ ಕುಡ್ಮೇರು, ಲಕ್ಷ್ಮೀ ಗೋಪಾಲಾಚಾರ್ಯ ಕ್ಷೇತ್ರದ ಉಪಾಧ್ಯಕ್ಷ ವಿಜಯ ರೈ ಅಜ್ಜಿಬೆಟ್ಟು, ಕಾರ್ಯದರ್ಶಿಗಳಾದ ರಮಾನಾಥ ರಾಯಿ, ಸೀತಾರಾಮ ಪೂಜಾರಿ, ಗಣೇಶ್ ರೈ,  ಹಾಗೂ ಪಂಚಾಯತ್ ಸಮಿತಿಯ ಸದಸ್ಯರು ಮತ್ತಿತರರು ಭಾಗವಹಿಸಿದ್ದರು.
ಪ್ರ.ಕಾರ್ಯದರ್ಶಿ ರಾಮದಾಸ ಬಂಟ್ವಾಳ ಪ್ರಾಸ್ತವಿಕ ಮಾತನಾಡಿದರು. ಪ್ರ.ಕಾರ್ಯದರ್ಶಿ ಮೋನಪ್ಪ ದೇವಸ್ಯ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *