ಬಂಟ್ವಾಳ:ಪೌರತ್ವ ಕಾಯಿದೆ ತಿದ್ದುಪಡಿ ಪರವಾಗಿ ಜನ ಜಾಗೃತಿ ಅಭಿಯಾನ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಕರ್ಪೆ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಮನೆ,ಮನೆ ಸಂಪರ್ಕಿಸಿ ಮಾಹಿತಿ ನೀಡಿದರು. ಸ್ಥಳೀಯ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಅವರ ನೇತೃತ್ವದಲ್ಲಿ ಮನೆ ಬೇಟಿ ಅಭಿಯಾನ ನಡೆಸಲಾಯಿತು.

ಈ ಸಂದರ್ಭದಲ್ಲಿ ಬಿ.ಜೆ.ಪಿ.ಬೂತ್ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂವಳ , ಪ್ರಮುಖರಾದ ಗಂಗಾಧರ ಪೂಜಾರಿ ,ಹರೀಶ್ ವರಸಾರಿ,ಉಮೇಶ್ ನಾಯ್ಕ,ಭಾಸ್ಕರ ಪ್ರಭು ಮತ್ತಿತರರು ಉಪಸ್ಥಿತರಿದ್ದರು