ಮಂಗಳೂರು : ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ 10 ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶ ಬೇಕೋ ಬೇಡವೋ ಎಂಬುದರ ಮರು ಪರಿಶೀಲನಾ ಅರ್ಜಿ ವಿಚಾರಣೆ, ಜನವರಿ 13 ರಂದು ಸುಪ್ರೀಂಕೋರ್ಟ್ನ ಒಂಭತ್ತು ಸದಸ್ಯರ ಪೀಠ ನಡೆಸಲಿದೆ ಎಂದು ಹೇಳಲಾಗಿತ್ತು. ಆದರೆ ನ್ಯಾಯಾಲಯ ವಿಚಾರಣೆಯನ್ನು 3ವಾರಗಳ ಕಾಲ ಮುಂದೂಡಿದೆ. ಅಯೋಧ್ಯೆ ಮಾದರಿ ವಿಚಾರಣೆಗೆ ಮುಂದಾಗಿರುವ ಕೋರ್ಟ್ ಯಾವ ಯಾವ ಅಂಶಗಳ ವಿಚಾರಣೆ ನಡೆಸಬೇಕು ಎಂಬುದನ್ನ ಫೈನಲ್ ಮಾಡಲು ಮುಂದಾಗಿದೆ.
ಇದೇ ತಿಂಗಳ 17ರಂದು ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಹಿರಿಯ ವಕೀಲರ ಸಭೆ ಕರೆಯಲಾಗಿದೆ.ಅಯೋಧ್ಯೆ ಪ್ರಕರಣದಲ್ಲಿ ವಕೀಲರಾದ ರಾಜೀವ್ ಧವನ್ ಮತ್ತು ವೈದ್ಯನಾಥನ್ ಅತ್ಯುತ್ತಮ ಕೆಲಸ ಮಾಡಿದ್ದರು. ಶಬರಿಮಲೆ ವಿಚಾರದಲ್ಲಿ ಅದೇ ಮಾದರಿ ಅನುಸರಿಸೋಣ. ತಾವು ವಾದಿಸುವ ವಿಚಾರದ ಬಗ್ಗೆ ವಕೀಲರು ತಮ್ಮತಮ್ಮಲ್ಲೇ ಮಾತನಾಡಿಕೊಳ್ಳಲಿ, ಅಲ್ಲದೆ ಅರ್ಜಿಗಳಲ್ಲಿ ಉಲ್ಲೇಖಿಸಿರುವ ಎಲ್ಲ ವಿಚಾರಗಳ ಬಗ್ಗೆಯೂ ನ್ಯಾಯಪೀಠವು ವಾದ-ಪ್ರತಿವಾದಗಳನ್ನು ಆಲಿಸಲಿದೆ ಸುಪ್ರೀಂಕೋರ್ಟ್ ತೀರ್ಪು ಪ್ರಶ್ನಿಸಿ 50ಕ್ಕೂ ಹೆಚ್ಚು ಮರುಪರಿಶೀಲನಾ ಅರ್ಜಿಗಳು ದಾಖಲಾಗಿವೆ.
ಈ ಎಲ್ಲ ಅರ್ಜಿಗಳ ಜೊತೆಗೆ ಮಸೀದಿಗಳಿಗೆ ಮಹಿಳೆಯರ ಪ್ರವೇಶ, ಪಾರ್ಸಿ ಮಹಿಳೆಯರಿಗೆ ಪವಿತ್ರ ಅಗ್ನಿ ಇರುವ ಸ್ಥಳಕ್ಕೆ ಪ್ರವೇಶ ಮತ್ತು ದಾವೂದಿ ಬೊರ್ಹಾ ಸಮುದಾಯದಲ್ಲಿ ಮಹಿಳೆಯರ ಜನನಾಂಗ ಛೇದನದ ಬಗ್ಗೆಯೂ ವಿಚಾರಣೆ ನಡೆಸಲು ನ್ಯಾಯಪೀಠ ಆಲೋಚಿಸುತ್ತಿದೆ ಎಂದು ನ್ಯಾಯಪೀಠದ ಮುಖ್ಯ ನ್ಯಾಯಮೂರ್ತಿ ಬೊಬ್ಡೆಬೋಬ್ಡೆ ಹೇಳಿದ್ದಾರೆ. ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿ 2018ರಲ್ಲಿ ಸಲ್ಲಿಕೆ ಆಗಿದ್ದ ಮೇಲ್ಮನವಿಯನ್ನು ಐದು ಸದಸ್ಯರ ಪೀಠ ವಿಚಾರಣೆ ನಡೆಸಿತ್ತು. ಈ ಅರ್ಜಿ ವಿಚಾರಣೆ ವೇಳೆ, ಎಲ್ಲ ವಯೋಮಾನದವರು ಶಬರಿಮಲೆಗೆ ಪ್ರವೇಶ ನೀಡಬಹುದೆಂದು ಅಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಸಭೆ ತೀರ್ಪು ನೀಡಿತ್ತು.
ಆದರೆ ಈ ತೀರ್ಪಿನ ವಿರುದ್ಧ ಭಾರಿ ವಿರೋಧ ಕೇಳಿ ಬಂದಿತ್ತು ಹಾಗೂ ತೀರ್ಪು ಮರುಪರಿಶೀಲಿಸುವಂತೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು.ಇದಾದ ನಂತರ 2019ರ ನವೆಂಬರ್ 14ರಂದು ತೀರ್ಪು ನೀಡಿದ್ದ ಪೀಠ, ಈ ಪ್ರಕರಣವನ್ನು 9 ಸದಸ್ಯರ ಪೀಠಕ್ಕೆ ವರ್ಗಾವಣೆ ಮಾಡಿತ್ತು. ಇದರ ಪ್ರಕಾರ ಅರ್ಜಿ ಮರುಶೀಲನ ಪ್ರಕ್ರಿಯೆ ಜನವರಿ 13ರಂದು ಪ್ರಾರಂಭವಾಗುವುದು ಎಂದು ತಿಳಿಸಿದ್ದರು. ಆದರೆ ಈಗ ಅಯೋಧ್ಯೆ ಮಾದರಿಯಲ್ಲಿ ಶಬರಿಮಲೆ
ವಿಚಾರಣೆ ಮಾಡಲು ಸುಪ್ರೀಂಕೋರ್ಟ್ ನಿರ್ಧರಿಸಿದ್ದು ಹಾಗಾಗಿ 3ವಾರಗಳ ಕಾಲ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.

