ಮೂಡುಬಿದಿರೆ: ಹಂಡೇಲು ಕಾಪಿಕಾಡು ಶ್ರೀ ಧರ್ಮಶಾಸ್ತಾ ಭಜನಾ ಮಂಡಳಿಯ ಮಂದಿರದಲ್ಲಿ ಸದಾನಂದ ಗುರುಸ್ವಾಮಿಯವರ ನೇತೃತ್ವದಲ್ಲಿ ಶ್ರೀಅಯ್ಯಪ್ಪ ಸ್ವಾಮಿಯ 13ನೇ ವರ್ಷದ ಮಹಾಪೂಜೆ, ದೀಪಾರಾಧನೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ ರವಿವಾರ ಜರಗಿತು.
ಶಾಸಕ ಉಮಾನಾಥ ಕೋಟ್ಯಾನ್ ಸಹಿತ ಗಣ್ಯರು, ಭಜನ ಮಂಡಳಿಯ ಅಧ್ಯಕ್ಷರು, ಪದಾಧಿಕಾರಿಗಳು, ಅಯ್ಯಪ್ಪ ವ್ರತಧಾರಿಗಳ ಸಹಿತ ಭಕ್ತರು ಪಾಲ್ಗೊಂಡಿದ್ದರು.