ಬಂಟ್ವಾಳ : ಸುಭಾಷ್ ಯುವಕ ಮಂಡಲ , ಶಾರದಾ ಪೂಜಾ ಸಮಿತಿ ಇದರ ಆಶ್ರಯದಲ್ಲಿ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲಾ ವಠಾರ ಸುಭಾಷ್ ನಗರ ಸಜಿಪ ಮೂಡ ದಲ್ಲಿ 88ನೇ ವರ್ಷದ ಶಾರದಾ ಪೂಜಾ ಮಹೋತ್ಸವದ ಸಭಾ ಕಾರ್ಯಕ್ರಮದಲ್ಲಿ ಸುಭಾಷ್ ಯುವಕ ಮಂಡಲದ ವತಿಯಿಂದ ಶಾರದಾದೇವಿಗೆ ನೂತನವಾಗಿ ರಚಿಸಿದ 1.25 ಲಕ್ಷ ವೆಚ್ಚದ ಬೆಳ್ಳಿಯ ವೀಣೆಯನ್ನು ಶಾರದಾ ಪೂಜಾ ಸಮಿತಿ ಅಧ್ಯಕ್ಷ ಶ್ರೀನಾಥ್ ಶೆಟ್ಟಿಯವರಿಗೆ ಸಜಿಪ ನಡು ಶಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ವೆಂಕಟೇಶ್ವರ ಭಟ್ ಹಸ್ತಾಂತರಿಸಿದರು .

ತಾ.ಪಂ.ಅಧ್ಯಕ್ಷ ಯಶವಂತ ಡಿ. , ಶ್ರೀ ವಿನಾಯಕ ಕ್ಷೇತ್ರ ನಂದಾವರದ ಆಡಳಿತ ಮೊಕ್ತೇಸರ ರಾಧಾಕೃಷ್ಣ ಆಳ್ವ , ಮಾಜಿ ಜಿ.ಪಂ.ಅಧ್ಯಕ್ಷ ಸದಾನಂದ ಪೂಂಜ , ಜಯಕನರ್ಾಟಕ ಜಿಲ್ಲಾ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ , ದೇವಿಪ್ರಸಾದ್ ಪೂಂಜ , ಸ್ಟೀವನ್ ಡಿಸೋಜ , ರವೀಂದ್ರ ಶೆಟ್ಟಿ , ಅಬ್ದುಲ್ ಕರೀಂ ಉಪಸ್ಥಿತರಿದ್ದರು.
