ಬಂಟ್ವಾಳ: ಟೆಂಪೋವೊಂದರಲ್ಲಿ  ಅನ್ನದಾಸೋಹದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದನ್ನು ಬಿ.ಸಿ.ರೋಡಿನಲ್ಲಿ ಪತ್ತೆ ಹಚ್ಚಿರುವ ಬಂಟ್ವಾಳ ನಗರ ಪೊಲೀಸರು ಈ ಸಂಬಂಧವಾಗಿ ಒರ್ವನನ್ನು ಬಂಧಿಸಿದ್ದಾರೆ. ಟೆಂಪೋ ಚಾಲಕ ಸಜೀಪನಡುಗ್ರಾಮದ ಅಬ್ದುಲ್ ರಜಾಕ್ ಬಂಧಿತ ಆರೋಪಿಯಾಗಿದ್ದಾನೆ.

ಬುಧವಾರ ಸಂಜೆ ಬಂಟ್ವಾಳ ನಗರ ಠಾಣೆಯ ಎಸ್ ಐ ಅವಿನಾಶ್ ಮತ್ತವರ ಸಿಬ್ಬಂದಿಗಳು ಬಿ.ಸಿ.ರೋಡಿನಲ್ಲಿ ವಾಹನ ತಪಾಸಣೆಯಲ್ಲಿ ನಿರತರಾಗಿದ್ದಾಗ ಮಂಗಳೂರಿನತ್ತ ತೆರಳುತ್ತಿದ್ದ 407 ಟೆಂಪೋವನ್ನು ತಡೆದು‌ ನಿಲ್ಲಿಸಿ ಪರಿಶೀಲಿಸಿದಾಗ ಸುಮಾರು 50 ಕೆಜಿ ತೂಕದ 17 ಗೋಣಿಚೀಲದಲ್ಲಿ ಪಡಿತರ ಅಕ್ಕಿ ಪತ್ತೆಯಾಗಿತ್ತು.ಇದಕ್ಕೆ ಯಾವುದೇ ದಾಖಲಾತಿಗಳು ಚಾಲಕನ ಬಳಿ ಇರದ ಹಿನ್ನಲೆಯಲ್ಲಿ ಇದರ ಪರಿಶೀಲನೆಗೆ ಬಂಟ್ವಾಳ ಆಹಾರ ನಾಗರಿಕ ಸರಬರಾಜು ಇಲಾಖೆಗೆ ಹಸ್ತಾಂತರಿಸಲಾಯಿತು.

ಸರಕಾರದ ಅನ್ನದಾಸೋಹದ ಪಡೊತರ ಅಕ್ಕಿಎಂಬುದನ್ನು ದೃಢ ಪಡಿಸಿದ ಆಹಾರ ಇಲಾಖೆಯ ಶಿರಸ್ತೇದಾರರಾದ ಶ್ರೀನಿವಾಸ್ ಅವರ ದೂರಿನಂತೆ ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ,ಟೆಂಪೋ ಸಹಿತ 17 ಗೋಣಿಚೀಲ ಅಕ್ಕಿಯನ್ನು ಮುಟ್ಟುಗೋಲು ಹಾಕಿದ್ದಾರೆ.ವಶಪಡಿಸಲಾದ ಟೆಂಪೋ ಸಹಿತ ಅಕ್ಕಿಯ ಒಟ್ಟು ಮೌಲ್ಯ 1,12,750 ರೂ.ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ.

By suddi9

Leave a Reply

Your email address will not be published. Required fields are marked *