ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನಾಪಡೆಯ ಎನ್ಕೌಂಟರ್ಗೆ ಮೂವರು ಉಗ್ರರು ಬಲಿಯಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ತಂಗಧಾರ್ ಸೆಕ್ಟರ್ ಬಳಿ ಗಡಿ ಉಲ್ಲಂಘಿಸಿ ನುಸುಳಲು ಯತ್ನಿಸುತ್ತಿದ್ದ ಮೂವರು ಉಗ್ರರನ್ನು ಸೇನಾಪಡೆ ಹತ್ಯೆ ಮಾಡಿದೆ. ಈ ಉಗ್ರರು ಲಷ್ಕರ್ ಎ ತೋಯ್ಬಾ ಉಗ್ರ ಸಂಘಟನೆಗೆ ಸೇರಿದವರಿರಬಹುದೆಂದು ಶಂಕಿಸಲಾಗಿದೆ.
ತಂಗಧಾರ್ ಬಳಿ ನಿನ್ನೆ ರಾತ್ರಿ ಗೌಪ್ಯವಾಗಿ ಗಡಿ ನುಸುಳಲು ಮೂವರು ಉಗ್ರರು ಯತ್ನಿಸಿದ್ದಾರೆ. ಈ ವೇಳೆ ಭಾರತೀಯ ಸೇನಾಪಡೆ ಉಗ್ರರ ಮೇಲೆ ಗುಂಡಿನ ದಾಳಿ ಮಾಡಿದೆ. ಈ ದಾಳಿಯಲ್ಲಿ ಮೂವರು ಉಗ್ರರು ಹತರಾಗಿದ್ದಾರೆ. ಉಗ್ರರು ಬಳಸುತ್ತಿದ್ದ ಎಕೆ 47, ರೈಫಲ್ ಹಾಗೂ ರಾತ್ರಿ ವೇಳೆ ನೋಡಲು ಬಳಸುವ ದೂರದರ್ಶಕವನ್ನು ಸೇನಾಪಡೆ ವಶಕ್ಕೆ ಪಡೆದಿದೆ.
