ಬಂಟ್ವಾಳ: ಕೋವಿಡ್ 19ರ ಹಿನ್ನೆಲೆಯಲ್ಲಿ ನಿಷೇಧಾಜ್ಞೆಯನ್ನು ಮತ್ತೆ ವಿಸ್ತರಿಸಿರುವುದರಿಂದ ಬೆಳಗ್ಗೆ 7ರಿಂದ 12 ಗಂಟೆ ಅವಧಿಯಲ್ಲಿ ಕೇವಲ ಸುತ್ತಾಟಕ್ಕೆ ಬರುವವರಷ್ಟೇ ಅಲ್ಲ, ಸ್ವಂತ ವಾಹನಗಳಲ್ಲಿ ಔಷಧ ವಸ್ತು ಖರೀದಿ, ಬ್ಯಾಂಕುಗಳಿಗೆ ಬರುವವರೂ ನಿಯಮ ಪಾಲಿಸಿಲ್ಲ ಎಂಬ ಕಾರಣಕ್ಕಾಗಿ ಬುಧವಾರ ಬಿ.ಸಿ.ರೋಡ್ ಫ್ಲೈಓವರ್ ಅಡಿಯಲ್ಲಿ ನಿಂತಿದ್ದ ಪೊಲೀಸರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು.17-09-56-WhatsApp-Image-2020-04-15-at-12.28.43-PM-768x432

ತುರ್ತು ವಿಷಯಗಳಾದ ಮೆಡಿಕಲ್, ವೆಟರ್ನರಿ ಕೇರ್, ಅಗತ್ಯ ವಸ್ತುಗಳ ಖರೀದಿ ಇದ್ದರೆ, ಖಾಸಗಿ ವಾಹನಗಳಲ್ಲಿ ಹಿಂದಿನ ಸೀಟಿನಲ್ಲಿ ಒಬ್ಬರಷ್ಟೇ ಕುಳಿತುಕೊಳ್ಳಲು ಅವಕಾಶವಿದೆ. ದ್ವಿಚಕ್ರವಾಹನವಾದರೆ, ಸವಾರನಿಗಷ್ಟೇ ಅವಕಾಶ ಎಂದು ಭಾರತ ಸರಕಾರದ ಗೃಹಸಚಿವಾಲಯ ಏ.15ರಂದು ಹೊರಡಿಸಿದ ಆದೇಶದಲ್ಲಿದ್ದು ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಸೂಚನೆಗಳ ಅರಿವಿಲ್ಲದವರು, ಬ್ಯಾಂಕು ಮತ್ತಿತರ ಕಡೆಗಳಿಗೆ ಬಂದವರೂ ಪೊಲೀಸರ ತಡೆಗೆ ಒಳಪಟ್ಟರು. ಬಳಿಕ ಎಡಿಶನಲ್ ಎಸ್ಪಿ ವಿಕ್ರಮ್ ಆಮ್ಟೆ ಸ್ಥಳಕ್ಕಾಗಮಿಸಿ ಸಮಸ್ಯೆಯನ್ನರಿತು ಕೆಲವರಿಗೆ ಸೂಚನೆ ನೀಡಿ ಕಳುಹಿಸಿದರು. ಕಾರ್ಯಾಚರಣೆಯಲ್ಲಿ ಬಂಟ್ವಾಳ ಡಿವೈಎಸ್ಪಿ ವೆಲಂಟೈನ್ ಡಿಸೋಜ, ಎಸ್ಸ್ಐ ಅವಿನಾಶ್, ಅಪರಾಧ ವಿಭಾಗ ಎಸ್ಸ್ಐ ಸಂತೋಷ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಬುಧವಾರ ಬಂಟ್ವಾಳ ಪೊಲೀಸರು ವಶಪಡಿಸಿಕೊಂಡ ವಾಹನಗಳಿಂದ ಸರಕಾರದ ಖಜಾನೆ ಭರ್ತಿ ಮಾಡಿದರೆ, ಖರೀದಿಗೆಂದು ಅಂಗಡಿ, ಮುಂಗಟ್ಟು ಅಲೆಯುತ್ತಿದ್ದವರು ಪರದಾಟವನ್ನೂ ಅನುಭವಿಸಬೇಕಾಯಿತು.
ಬ್ಯಾಂಕ್ ಮುಂದೆ ಕ್ಯೂ: 
 ರಾಷ್ಟ್ರೀಕೃತ ಬ್ಯಾಂಕ್ ಮುಂದೆಯು ಬುಧವಾರ ಹಣ ಪಡೆಯಲು ಜನ ಸರತಿಯಲ್ಲಿ ನಿಂತಿದ್ದ ದೃಶ್ಯ ಕಂಡುಬಂತು.ಮಂಗಳವಾರ ಬ್ಯಾಂಕಿಗೆ ರಜೆ ಇದ್ದ ಹಿನ್ನಲೆಯಲ್ಲಿ ಬುಧವಾರ ಹಣದವ್ಯವಹಾರ ಮತ್ರು ಜನ್ ಧನ್ ಖಾತೆಯ ಹಣಕ್ಕಾಗಿ ಹೆಚ್ಚಾಗಿ ಮಹಿಳೆಯರೇ ಬ್ಯಾಂಕ್ ಮುಂದೆ ಸೇರಿದ್ದರು.ರಾಷ್ಟ್ರೀಕೃತ ಬ್ಯಾಂಕ್ ವೊಂದರಲ್ಲಿ ಶಾಮೀಯಾನ ಹಾಕಿ ಸಾಮಾಜಿಕ ಅಂತರ ಕಾಯ್ದುಕೊಂಡು ಸರತಿಯಲ್ಲಿದ್ದರೆ ಕೆಲ ಬ್ಯಾಂಕ್ ಗಳಲ್ಲಿ ಇದ್ಯಾವುದು ವ್ಯವಸ್ಥೆ ಇಲ್ಲದೆ ಬಿಸಿಲಲ್ಲೆ ಜನರು ನಿಂತಿದ್ದರು.ಇದೇ ವೇಳೆ ಗಸ್ತ್ ನಲ್ಲಿದ್ದ ಎಸ್ಪಿ ಲಕ್ಷ್ಮೀಪ್ರಸಾದ್ ಅವರು ಇದನ್ನು ಗಮನಿಸಿ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗವು ನಡೆಯಿತು. ಈ ಬಗ್ಗೆ ಮಾಹಿತಿ ಪಡೆದ ತಹಶೀಲ್ದಾರ್ ರಶ್ಮೀ ಅವರು ಕೆಲ ಬ್ಯಾಂಕ್ ಶಾಖೆಗಳಿಗೆ ತೆರಳಿ ವ್ಯವಸ್ಥಾಪಕರಿಗೆ ಎಚ್ಚರಿಕೆ ನೀಡಿ ಬಂದಿದ್ದಾರೆ.
ಅವಧಿಗೆ ಮುನ್ನ ಬಂದ್ :
ದಿನಸಿ,ತರಕಾರಿ ಹೊರತು ಪಡಿಸಿ ಯಾವುದೇ ಅಂಗಡಿಗಳನ್ನು ತೆರೆಯಲು ಪೋಲಿಸರು ಅವಕಾಶ ನೀಡಲಿಲ್ಲ,ಅವಧಿಗೆ ಮುನ್ನವೇ ಪೋಲಿಸರು ಧ್ವನಿವರ್ಧಕದ ಮೂಲಕ ತೆರೆದ ಅಂಗಡಿಯನ್ನು ಮುಚ್ಚುವಂತೆ ಮತ್ತು ಜನರನ್ನು ಎಚ್ಚರಿಸಿ ಮನೆಯತ್ತ ಕಳುಹಿಸುತ್ತಿದ್ದರು.

By suddi9

Leave a Reply

Your email address will not be published. Required fields are marked *