ಬಂಟ್ವಾಳ: ತಾಲೂಕಿನ ಕರಿಯಂಗಳ ಗ್ರಾಮದ ಕರಿಯಂಗಳ ಪಲ್ಗುಣಿ ನದಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮರಳುಗಾರಿಕಾ ಅಡ್ಡೆಗೆ ಬಂಟ್ವಾಳ ಗ್ರಾಮಾಂತರ ಪೋಲಿಸರು ಗುರುವಾರ ಸಂಜೆ ದಾಳಿ ನಡೆಸಿ ಲಕ್ಷಾಂತರ ರೂ.ಮೌಲ್ಯದ ಸೊತ್ತುಗಳನ್ನು ವಶ ಪಡಿಸಿ,ಒರ್ವನನ್ನು ಬಂಧಿಸಿದ್ದಾರೆ. 
ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಠಾಣೆಯ ಪ್ರೋಬೆಷನರಿ ಐ.ಪಿ.ಎಸ್.ರಂಜಿತ್ ಅವರ ನೇತೃತ್ವದ ಪೋಲೀಸ್ ತಂಡ ಈ ದಾಳಿ ಕಾರ್ಯಾಚರಣೆ ನಡೆಸಿದ್ದು ಟಿಪ್ಪರ್ ಚಾಲಕ ಪಾಂಡುರಂಗ ಎಂಬಾತನನ್ನು ಬಂಧಿಸಲಾಗಿದ್ದು, ಉಳಿದಂತೆ ನಾಲ್ವರು ಪರಾರಿಯಾಗಿದ್ದಾರೆ. ಹಾಗೆಯೇ ಸ್ಥಳದಲ್ಲಿ ದಾಸ್ತಾನಿಟ್ಟಿದ್ದ 10 ಲೋಡ್ ಮರಳು, ತಲಾ ಒಂದೊಂದು ಟಿಪ್ಪರ್, ಹಿಟಾಚಿ, 3 ಬೋಟ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಇದರ ಒಟ್ಟು ಮೌಲ್ಯ 20 ಲಕ್ಷ ರೂ.ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಮುಂದಿನ ತನಿಖೆನಡೆಯುತ್ತಿದೆ.ಲಾಕ್ ಡೌನ್ ಅವಧಿಯಲ್ಲು ಇಂತಹ ಅಕ್ರಮ ದಂಧೆಗಳು ನಡೆಯುತ್ತಿರುವುದು ಸಾರ್ವಜನಿಕ ವಲಯದಲ್ಲಿ ವಿವಿಧ ರೀತಿಯ ಚರ್ಚೆಗೆ ಕಾರಣವಾಗಿದೆ.