ಬಂಟ್ವಾಳ: ಹೊರರಾಜ್ಯದಿಂದ ಆಗಮಿಸುವ ಬಂಟ್ವಾಳ ಸುತ್ತಮುತ್ತಲಿನ ನಾಗರೀಕರ ಕ್ವಾರಂಟೈನ್  ವ್ಯವಸ್ಥೆಯ ಹಿನ್ನಲೆಯಲ್ಲಿ ಬಂಟ್ವಾಳ ತಾಲೂಕಿನ ವಸತಿಗೃಹಗಳ ಮಾಲಕರ ಸಭೆಯು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಬಿ.ಸಿ.ರೋಡ್ ಕಚೇರಿಯಲ್ಲಿ ಸೋಮವಾರ  ನಡೆಯಿತು.

IMG-20200518-WA0054ಕ್ವಾರಂಟೈನ್ ನಲ್ಲಿರುವವರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು  ಸೂಕ್ತ  ವ್ಯವಸ್ಥೆ ಕಲ್ಪಿಸುವಂತೆ ಶಾಸಕ ರಾಜೇಶ್ ನಾಯ್ಕ್ ಅವರು ಸೂಚಿಸಿದರು. ಈ ಸಂದರ್ಭ ತಾಲೂಕು ತಹಶೀಲ್ದಾರ್ ರಶ್ಮೀ ಎಸ್.ಆರ್.ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರು ಸೂಕ್ತ ಸಲಹೆ,ಸೂಚನೆಗಳನ್ನಿತ್ತರು. ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ,ಬಂಟ್ವಾಳ ನಗರ ಠಾಣೆಯ ಎಸ್ ಐ ಅವಿನಾಶ್, ಶಾಸಕರ ಆಪ್ತ ಕಾರ್ಯದರ್ಶಿ ದಿನೇಶ್ ವಿವಿಧ ವಸತಿಗೃಹಗಳ ಮಾಲಕರು ಸಭೆಯಲ್ಲಿ ಭಾಗವಹಿಸಿದರು.

By suddi9

Leave a Reply

Your email address will not be published. Required fields are marked *