ಬಂಟ್ವಾಳ : ಕಲ್ಲಡ್ಕ ರೈತರ ಸೇವಾ ಸಹಕಾರ ಸಂಘದ ವತಿಯಿಂದ ಸಂಘದ ವ್ಯಾಪ್ತಿಯ ೫ ಗ್ರಾಮಗಳ ಆಶಾ ಕಾರ್ಯಕರ್ತೆಯರಿಗೆ ಮತ್ತು ಆರೋಗ್ಯ ಸಹಾಯಕರಿಗೆ ಗೌರವಧನ ವಿತರಣಾ ಕಾರ್ಯಕ್ರಮ ಸಂಘದ ವಠಾರದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಅವರು ಗೌರವ ಧನ ವಿತರಿಸಿ ಮಾತನಾಡಿ, ಕೊರೋನಾ ಮಹಾಮಾರಿಯ ವಿರುದ್ಧ ದುಡಿಯುತ್ತಿರುವ ಆಶಾ ಕಾರ್ಯಕರ್ತರ ಶ್ರಮ ಶ್ಲಾಘನೀಯ. ಕೊರೋನಾ ವಿರುದ್ಧ ನಾವೆಲ್ಲರೂ ಹೋರಾಡಿ ಸಾಮಾಜಿಕ ಅಂತರ ಪಾಲಿಸಿ ದೇಶವನ್ನು ಕೊರೊನಾ ಮುಕ್ತವಾಗಿಸಲು ಶ್ರಮಿಸಬೇಕಿದೆ ಎಂದರು.ಸAಘದ ಕಾರ್ಯವ್ಯಾಪ್ತಿಯ ೨೨ ಆಶಾ ಕಾರ್ಯಕರ್ತರು ಮತ್ತು ೬ ಆರೋಗ್ಯ ಸಹಾಯಕರಿಗೆ ತಲಾ ೧೫೦೦ ರೂ.ಗಳಂತೆ ಗೌರವಧನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ದ.ಕ.ಹಾಲು ಒಕ್ಕೂಟದ ನಿರ್ದೇಶಕಿ ಸವಿತಾ ಎನ್.ಶೆಟ್ಟಿ, ಉಪವ್ಯವಸ್ಥಾಪಕ ಎಸ್.ಪ್ರಭಾಕರ್, ವಿಸ್ತರಣಾಽಕಾರಿಗಳಾದ ದೇವರಾಜ್ ಎಸ್.ಎನ್, ಜಗದೀಶ ಎ, ಸರೋಜಿನಿ, ಮಾರುಕಟ್ಟೆ ಅಽÃಕ್ಷ ರವಿ, ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕರು, ಮುಖ್ಯಕಾರ್ಯನಿರ್ವಹಣಾಽಕಾರಿ ಸುರೇಶ್ ಕೆ, ಶಾಖಾ ವ್ಯವಸ್ಥಾಪಕ ಗೋಪಾಲ ಕೆ.ಉಪಸ್ಥಿತರಿದ್ದರು.ದ.ಕ.ಹಾಲು ಒಕ್ಕೂಟದ ನಿರ್ದೇಶಕ, ಸಂಘದ ಉಪಾಧ್ಯಕ್ಷ ಬಿ.ಸುಧಾಕರ ರೈ ಬೋಳಂತೂರು ಸ್ವಾಗತಿಸಿ, ಕಲ್ಲಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಽಕಾರಿ ರಾಜೇಶ್ ವಂದಿಸಿದರು.