ಬಂಟ್ವಾಳ: ದ.ಕ.ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಯ ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ  17  ಡಾಟ ಎಂಟ್ರಿ ಆಪರೇಟರ್ ರವರನ್ನು ಏಕಾಏಕಿ ಕೆಲಸದಿಂದ ಕೈ ಬಿಡಲಾಗಿದ್ದು,ನಮ್ಮ ಜೀವನ ಸಂಕಷ್ಟಕ್ಕೊಳಗಾಗಿದೆ ಎಂದು ಡಾಟ ಎಂಟ್ರಿ ಅಪರೇಟರ್ ಗಳು ಅಳಲನ್ನು ತೋಡಿಕೊಂಡಿದ್ದಾರೆ. ಮಂಗಳವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾಟ ಎಂಟ್ರಿ ಅಪರೇಟರ್ ಗಳಾದ ಪ್ರಮೀಳಾ,ಪೂಜಾಶ್ರೀ,ಗುಣಶ್ರೀ, ನಮಿತಾ,ಭವ್ಯಾ ಅವರು ಕೋವಿಡ್ -೧೯ ನೆಪದಲ್ಲಿ  ನಮ್ಮನ್ನು ಕೆಲಸದಿಂದ ಕೈಬಿಟ್ಟರುವುದು ಬೇಸರ ತಂದಿದೆ.IMG-20200616-WA0016

ಈ ಕೆಲಸದಿಂದಾಗಿ ನಮ್ಮ ಸಂಸಾರಕ್ಕೆ  ಆಧಾರವಾಗಿದ್ದೆವು, ಗುತ್ತಿಗೆದಾರರು ದೂರವಾಣಿ ಕರೆ ಮಾಡಿ ಏಕಾಏಕಿ ನಮ್ಮನ್ನು ಕೆಲಸಕ್ಕೆ ಬರಬೇಡಿ ಎಂದಿದ್ದಾರೆ.ಇದರಿಂದಾಗಿ  ನಮ್ಮ ಸಂಸಾರವು ಬೀದಿಗೆ ಬರುವಂತಾಗಿದೆ ಎಂದರು.  ರಾಜ್ಯದಲ್ಲಿ ಒಟ್ಟು  795 ಮಂದಿ ,ದ.ಕ.ಜಿಲ್ಲೆಯಲ್ಲಿ ಒಬ್ಬರು ಅಂಗವಿಕಲರು ಸೇರಿದಂತೆ  17 ಮಂದಿ ಡಾಟ ಎಂಟ್ರಿ ಅಪರೇಟರ್ ಗಳು ಕೆಲಸ ಕಳೆದುಕೊಂಡಿದ್ದಾರೆ ಎಂದು ಅವರು , ಒಂದೆಡೆ ಸರಕಾರ ಯಾರನ್ನು ಕೆಲಸದಿಂದ ವಜಾಗೊಳಿಸಬಾರದು ಎಂದು ಹೇಳುತ್ತಿದೆ ಇತ್ತ ನಮ್ಮಂತ ಬಡವರನ್ನು ಏಕಾಏಕಿ ಕೆಲಸದಿಂದ ವಜಾಗೊಳಿಸಿ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.

ಕಳೆದ ಮೂರು ತಿಂಗಳಿನಿಂದ ವೇತನವನ್ನು ನೀಡದೆ ನಮ್ಮನ್ನು ದುಡಿಸಲಾಗಿದೆ, ಬಂಟ್ವಾಳದಲ್ಲಿ ಕೊರೋನ ಮಹಾಮಾರಿ ಪ್ರಕರಣಗಳಿದ್ದಗಲೂ ತಾಲೂಕಾಡಳಿತ ನಮ್ಮನ್ನು ಕರೆಸಿ ದುಡಿಸಿದ್ದು,ಮೇ.8 ರಂದು  ಗುತ್ತಿಗೆದಾರರು ಕರೆ ಮಾಡಿ ಮರುದಿನದಿಂದ ಕೆಲಸಕ್ಕೆ ಬರುವುದು ಬೇಡ ಎಂದು ಸೂಚಿಸಿದ್ದಾರೆ ಎಂದರು.

ಇದೀಗ ದುಡಿದ ವೇತನವು ಇಲ್ಲ,ಕೆಲಸವು ಇಲ್ಲದ ಪರಿಸ್ಥಿತಿ ನಮ್ಮದಾಗಿದೆ.ಈ ಬಗ್ಗೆ ತಹಶೀಲ್ದಾರ್ ಅವರ ಗಮನಕ್ಕೆ ತಂದಿದ್ದು,ಅವರು ಕೂಡ ನಾವೇನು ಮಾಡುವಂತಿಲ್ಲ ಎಂದಿದ್ದಾರೆ ಎಂದರು.

ಶಾಸಕ ರಾಜೇಶ್ ನಾಯ್ಕ್ ಅವರ ಸಹಿತ ಆಯಾಯ ತಾಲೂಕಿನಲ್ಲಿ ಶಾಸಕರ ಗಮನಕ್ಕು ತರಲಾಗಿದೆ.ಹಾಗೆಯೇ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಿದ್ದವೆ , ಕೋವಿಡ್ ನಂತಹ ಈ ಸಂದರ್ಭದಲ್ಲಿ ನಮ್ಮನ್ನು ಕೆಲಸದಿಂದ  ಕೈ ಬಿಟ್ಟಿರುವುದಿಂದ ನಮ್ಮ ಜೀವನ ನಡೆಸುವುದಕ್ಕೆ ಕಷ್ಟಸಾಧ್ಯವಾಗಿದೆ. ಗುತ್ತಿಗೆಯಾಧಾರದಲ್ಲಿ ಈಗ ದುಡಿಯುತ್ತಿರುವವರನ್ನಿರಿಸಿಕೊಂಡು ರೋಟೇಷನ್ ಆಧಾರದಲ್ಲಿಯಾದರೂ ನಮ್ಮನ್ನು ಕೆಲಸಕ್ಕೆ ಸೇರಿಸಿಕೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ

By suddi9

Leave a Reply

Your email address will not be published. Required fields are marked *