ಬಂಟ್ವಾಳ:  ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಬಿಜೆಪಿಯ ವಿವಿಧ ಮೋರ್ಚಾಗಳ ನೂತನ ಪದಾಧಿಕಾರಿಗಳ ತಂಡವನ್ನು ರಚಿಸಲಾಗಿದ್ದು,ಇದರ ಪಟ್ಡಿಯನ್ನು ಕ್ಷೇತ್ರ ಸಮಿತಿಯ ಅಧ್ಯಕ್ಷ ದೇವಪ್ಪ ಪೂಜಾರಿ ಬಿಡುಗಡೆಗೊಳಿಸಿದ್ದಾರೆ. ಯುವ ಮೋರ್ಚಾ: ಬಂಟ್ವಾಳ ಕ್ಷೇತ್ರ ಬಿಜೆಪಿಯ ಯುವ ಮೋರ್ಚಾದ ಅಧ್ಯಕ್ಷ ಪ್ರದೀಪ್ ಅಜ್ಜಿಬೆಟ್ಟು ಅವರ ಸಾರಥ್ಯದಲ್ಲಿ ನೂತನ ಪದಾಧಿಕಾರಿಗಳ ಹಾಗೂ ಸಮಿತಿಯನ್ನು ರಚಿಸಲಾಗಿದೆ.ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ ಶೆಟ್ಟಿ ದಂಬೆದಾರು ಉಪಾಧ್ಯಕ್ಷರಾಗಿ ಕಾರ್ತಿಕ್ ಬಳ್ಳಾಲ್, ಸುರೇಶ್ ಕೊಟ್ಯಾನ್. ಕಾರ್ಯದರ್ಶಿಗಳಾಗಿ-ಪ್ರಮೋದ್, ಅಶ್ವತ್ ಕುಮಾರ್. ಕೋಶಾಧಿಕಾರಿಯಾಗಿ ಶೈಲೇಶ್ ಮತ್ತು 10 ಮಂದಿಯನ್ನೊಳಗೊಂಡು ಸಮಿತಿಯನ್ನು ರಚಿಸಲಾಗಿದೆ.
ಹಿಂದುಳಿದ ವರ್ಗ ಕ್ಕೆ ಆನಂದ ಶಂಭೂರು :  ಬಂಟ್ವಾಳ ವಿಧಾನಸಭಾ ಕ್ಷೇತ್ರದ ಹಿಂದುಳಿದ ವರ್ಗ ಮೋರ್ಚಾ ಅಧ್ಯಕ್ಚರಾಗಿ ಆನಂದ ಎ ಶಂಭೂರು ಅವರನ್ನು ಆಯ್ಕೆಗೊಳಿಸಲಾಗಿದೆ.ಉಳಿದಂತೆ ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಅರಳ, ಉಪಾಧ್ಯಕ್ಷರಾಗಿ ಮಚ್ಚೇಂದ್ರ ಸಾಲ್ಯಾನ್, ಪುರುಷೋತ್ತಮ ಟೈಲರ್, ಕಾರ್ಯದರ್ಶಿಗಳಾಗಿ ಮೋಹನದಾಸ ಕೊಟ್ಟಾರಿ, ಸಂತೋಷ ಮೂಡನಡುಗೋಡು, ಕೋಶಾಧಿಕಾರಿಯಾಗಿ ಪರಮೇಶ್ವರ ಪೂಜಾರಿ ರಾಯಿ ಹಾಗೂ ೧೦ ಮಂದಿಯನ್ನು  ಸಮಿತಿ ಸದಸ್ಯರನ್ನಾಗಿ ನೇಮಿಸಲಾಗಿದೆ. ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿ ಭಾರತಿ ಚೌಟ: ಆದೇ ರೀತಿ ಬಂಟ್ವಾಳ ಕ್ಷೇತ್ರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿ ಭಾರತಿ ಎಸ್.ಚೌಟ ಅವರನ್ನು ಆಯ್ಕೆಗೊಳಿಸಿದ್ದಾರೆ.ಉಳಿದಂತೆ ಪ್ರಧಾನಕಾರ್ಯದರ್ಶಿಯಾಗಿ ಸೀಮಾಮಾಧವ,ಉಪಾಧ್ಯಕ್ಷರಾಗಿ ಲಕಿತಶೆಟ್ಟಿ,ಲಕ್ಷ್ಮೀಪ್ರಭು,ಕಾರ್ಯದರ್ಶಿಗಳಾಗಿ ಗೀತಾ ಚಂದ್ರಶೇಖರ್,ಕಮಾಲಾಲ್ಷಿ.ಕೆ.ಕೂಜಾರಿ,ಕೋಶಾಧಿಕಾರೊಯಾಗಿ ಸವಿತಾ ಅವರು ನೇಮಕಗೊಂಡಿದ್ದು,10 ಮಂದಿಯನ್ನೊಳಗೊಂಡ ಸಮಿತಿಯನ್ನು ನಿಯೋಜಿಸಲಾಗಿದೆ.ಈ ಮೂರು ಮೋರ್ಚಾಗಳ ನೂತನ ತಂಡಕ್ಕೆ ಕೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ ಮತ್ತು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಶುಭಹಾರೈಸಿದ್ದಾರೆ.

 

By suddi9

Leave a Reply

Your email address will not be published. Required fields are marked *