ಬಂಟ್ವಾಳ: ಪ್ರಸ್ತುತ ಸಮಾರಂಭಗಳು ಸರಳವಾಗಿ ಹಾಲಿನ ಮಾರುಕಟ್ಟೆಗೆ ಹೊಡೆತ ಬಿದ್ದಿದ್ದು, ಒಂದೂವರೆ ಲಕ್ಷ ಲೀಟರ್ ಹೆಚ್ಚುವರಿ ಹಾಲನ್ನು ಪರಿವರ್ತನೆ ಮಾಡಲು ೧೫ ಲಕ್ಷ ರೂ.ಹೆಚ್ಚುವರಿ ಹೊರೆ ಬೀಳುತ್ತಿದೆ ಎಂದು  ದ.ಕ.ಹಾಲು ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ ಹೆಗ್ಡೆ  ಹೇಳಿದ್ದಾರೆ. ಶನಿವಾರ ಬಂಟ್ವಾಳ ತಾ.ನ ದೇವಶ್ಯಮೂಡೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ’ ಅಮೃತಧಾರೆ’ ನೂತನ ಕಟ್ಟಡದಲ್ಲಿ ಸಾಂದ್ರಶೀತಲೀಕರಣ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.DSC_0508

ಅವರು ಈ ಎಲ್ಲಾ ಸವಾಲುಗಳ ಮಧ್ಯೆಯೂ ಇತರ ಎಲ್ಲಾ ಒಕ್ಕೂಟಗಳಿಗಿಂತಲೂ ನಮ್ಮ ಒಕ್ಕೂಟದ ಹೈನುಗಾರರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದರು.  ಸಂಘದ ನೂತನ ಕಟ್ಟಡ’  ‘ ಅಮೃತಧಾರೆ’ಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್  ಉಳಿಪ್ಪಾಡಿಗುತ್ತು ಅವರು ಉದ್ಘಾಟಿಸಿ ಶುಭಹಾರೈಸಿದರು. ಒಕ್ಕೂಟದ ಉಪಾಧ್ಯಕ್ಷ ಪ್ರಕಾಶ್‌ಚಂದ್ರ ಶೆಟ್ಟಿ ಅವರು ಗೋದಾಮು ಉದ್ಘಾಟಿಸಿದರು. ಸಂಘದ ಅಧ್ಯಕ್ಷೆ ಜಾಹ್ನವಿ ಆರ್.ರಾವ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ| ಜಿ.ವಿ.ಹೆಗ್ಡೆ, ನಿರ್ದೇಶಕರಾದ ಬಿ.ಸುಧಾಕರ ರೈ, ಸವಿತಾ ಎನ್.ಶೆಟ್ಟಿ, ಸುಭದ್ರಾ ರಾವ್, ಜಿ.ಪಂ.ಸದಸ್ಯ ಪದ್ಮಶೇಖರ್ ಜೈನ್, ತಾ.ಪಂ.ಸದಸ್ಯೆ ಸ್ವಪ್ನಾ ವಿಶ್ವನಾಥ್, ಒಕ್ಕೂಟದ ವ್ಯವಸ್ಥಾಪಕ ಡಾ| ನಿತ್ಯಾನಂದ ಭಕ್ತ, ಉಪವ್ಯವಸ್ಥಾಪಕ ಪ್ರಭಾಕರ ಎಸ್, ಸ್ಥಳೀಯ ಗ್ರಾ.ಪಂ.ಸದಸ್ಯರಾದ ದಯಾನಂದ ಶೆಟ್ಟಿ ಅಮೈ, ಗೀತಾ, ಮಣಿನಾಲ್ಕೂರು ಸಿಎ ಬ್ಯಾಂಕ್ ಅಧ್ಯಕ್ಷ ರಾಧಾಕೃಷ್ಣ ಮಯ್ಯ, ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಧಾಕರ ಶೆಟ್ಟಿ ಎಚ್. ಮೊದಲಾದವರು ವೇದಿಕೆಯಲ್ಲಿದ್ದರು.ಸಂಘದ ಕಾರ್ಯದರ್ಶಿ ಹೇಮಾವತಿ ಪಿ. ವಂದಿಸಿದರು. ವಿಸ್ತರಣಾಧಿಕಾರಿ ಜಗದೀಶ ಎ. ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *