ಬಂಟ್ವಾಳ: ತಾಲೂಕಿನ ಐತಿಹಾಸಿಕ ಹಿನ್ನಲೆಯುಳ್ಳ ಮೆಲ್ಕಾರ್ ಸಮೀಪದ ನರಹರಿ ಪರ್ವತ ಶ್ರೀಸದಾಶಿವ ದೇವಸ್ಥಾನದಲ್ಲಿ ಜು.20 ನಡೆಯಬೇಕಾಗಿದ್ದ ಆಟಿ ಅಮಾವಾಸ್ಯೆಯ ತೀರ್ಥಸ್ನಾನ ಇರುವುದಿಲ್ಲ ಎಂದು ದೇವಳದ ಪ್ರಕಟಣೆ ತಿಳಿಸಿದೆ.ಶ್ರೀ ಕ್ಷೇತ್ರದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.

ಸರಕಾರದ ಆದೇಶದನ್ವಯ ದೇವಸ್ಥಾನದಲ್ಲಿ ಭಕ್ತರು ಸೇರುವುದಕ್ಕೆ ಅವಕಾಶವಿಲ್ಲದಿದ್ದು,ಹೀಗಾಗಿ ತೀತರ್ರಸ್ನಾನ ಸಹಿತ ಯಾವುದೇ ಸೇವೆಗಳು ಇರುವುದಿಲ್ಲ,ಭಕ್ತರು ಸಹಕರಿಸುವಂತೆ  ದೇವಳದ ಆಡಳಿತ ಮೊಕ್ತೇಸರ ಡಾ.ಪ್ರಶಾಂತ್ ಮಾರ್ಲ,ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಡಾ.ಆತ್ಮರಂಜನ್ ರೈ ಕೋರಿದ್ದಾರೆ.

ಸಮುದ್ರಮಟ್ಟದಿಂದ 1000 ಅಡಿ ಎತ್ತರದ ನಯನಮನೋಹರ ಪರಿಸರದಲ್ಲಿರುವ ನರಹರಿ ಪರ್ವತದ ಶ್ರೀ ಸದಾಶಿವ ದೇವಸ್ಥಾನದಲ್ಲಿರುವ ಶಂಖ,ಚಕ್ರ,ಗದಾ,ಪದ್ಮ ಎಂಬ ನಾಲ್ಕು ‌ತೀರ್ಥಕೆರೆಗಳಿದ್ದು,ಆಟಿ ಅಮಾವಾಸ್ಯೆಯಂದು ನೂತನವಧು-ವರರ ಸಹಿತ ಸಾವಿರಾರು ಮಂದಿ ಭಕ್ತರು ಸಾಲುಗಟ್ಟಿ ಬಂದು ಈ ಕೆರೆಯಲ್ಲಿ ತೀರ್ಥಸ್ನಾನಗೈದು ಪುನೀತರಾಗುತ್ತಾರೆ.ಕೊರೋನ ಸೋಂಕುವಿನ ಹಿನ್ನಲೆಯಲ್ಲಿ ಈ ಬಾರಿ ತೀರ್ಥಸ್ನಾನ ರದ್ದುಗೊಂಡಿದೆ.ಹಾಗಯೇ ತಾಲೂಕಿನ ಇನ್ನೊಂದು ಪವಿತ್ರ ಕ್ಷೇತ್ರವಾದ ಶ್ರೀಕಾರಿಂಜದಲ್ಲು ತೀರ್ಥಸ್ನಾನವನ್ನು ರದ್ದುಗೊಳಿಸಲಾಗಿದೆ. 

By suddi9

Leave a Reply

Your email address will not be published. Required fields are marked *