ಬಂಟ್ವಾಳ: ತಾಲೂಕಿನ ಕರ್ಪೆ ಗ್ರಾಮದ ಸಮಾಜ ಮಂದಿರದ ಸಭಾ ಭವನದಲ್ಲಿ ಬಂಟ್ವಾಳ ಹೋಬಳಿ ಮಟ್ಟದ’ ಬೀಜೋಪಚಾರ ಹಾಗೂ ಸುರಕ್ಷಿತ ಕೀಟನಾಶಕಗಳ ಬಳಕೆ’ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮವನ್ನು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೈತ ಸಂಘದ ಅಧ್ಯಕ್ಷ ಹರ್ಷಿತ್ ಮಾದಾಯಿ ವಹಿಸಿದ್ದರು. ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ನವೀನ್ ಕುಮಾರ್ ಮತ್ತು ಡಾ. ಕೇದಾರನಾಥ್ ಇವರು ಬೀಜೋಪಚಾರ ಹಾಗೂ ಸುರಕ್ಷಿತ ಕೀಟನಾಶಕಗಳ ಬಳಕೆ ಕುರಿತು ರೈತರಿಗೆ ತರಬೇತಿಯನ್ನು ನೀಡಿದರು.
ಸಂಗಬೆಟ್ಟು ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ , ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಕರ್ಪೆ ಇವರು ಭಾಗವಹಿಸಿ ತರಬೇತಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ರೈತರೊಂದಿಗೆ ಹಾಗೂ ವಿಜ್ಞಾನಿಗಳೊಂದಿಗೆ ಮುಕ್ತವಾಗಿ ಚರ್ಚಿಸಿದರು. ಬಂಟ್ವಾಳ ಹೋಬಳಿ ಸಹಾಯಕ ಕೃಷಿ ಅಧಿಕಾರಿ ಶ್ರೀ ನಾರಾಯಣ ನಾಯ್ಕ ಇವರು ಕೃಷಿ ಇಲಾಖೆಯಲ್ಲಿ ರೈತರಿಗೆ ಸಹಾಯಧನದಲ್ಲಿ ದೊರೆಯುವ ಸವಲತ್ತುಗಳ ಕುರಿತು ಮಾಹಿತಿ ನೀಡಿದರು. ಕರ್ಪೆ ರೈತ ಸಂಘದ ಪದಾಧಿಕಾರಿಗಳು,ರೈತರು, ರೈತ ಮಹಿಳೆಯರು ಹಾಗೂ ನಿವೃತ್ತ ಅಧ್ಯಾಪಕ ನಾರಾಯಣ ನಾಯಕ್ ಕರ್ಪೆ ಭಾಗವಹಿಸಿದ್ದರು.ಬಂಟ್ವಾಳ ತಾಲೂಕು ಸಹಾಯಕ ಕೃಷಿ ನಿರ್ದೇಶಕರಾದ ಕೆ ನಾರಾಯಣ ಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು. ಗುಣಪಾಲ್ ಶೆಟ್ಟಿ ಕರ್ಪೆ ಇವರು ಸ್ವಾಗತಿಸಿ,ಕಾರ್ಯಕ್ರಮ ನಿರ್ವಹಿಸಿದರು.
