ಬಂಟ್ವಾಳ :ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ 97 ಶೇಕಡ ಅಂಕ ಪಡೆದ ವಿಶಿತ್ ಪ್ರೇಮ್ ವಾಸ್ ,96 ಶೇಕಡ ಅಂಕ ಪಡೆದ ಅಶ್ವಿನ್ ಲೋಬೋ ಪಿಯುಸಿಯಲ್ಲಿ 77 ಶೇಕಡ ಅಂಕ ಪಡೆದ ವಿಕಲಾಂಗ ಬಾಲಕಿ ಭಾಗ್ಯಶ್ರೀ ಕುರಿಯಾಲ ಅವರನ್ನು ಅಮ್ಟಾಡಿ ಸೇವಾ ಸಹಕಾರಿ ಸಂಘ ದ ವತಿಯಿಂದ ಅಮ್ಟಾಡಿ ಸೇವ ಸಹಕಾರಿ ಸಂಘದ ಕೇಂದ್ರ ಕಚೇರಿಯಲ್ಲಿ ಸಂಘದ ಅಧ್ಯಕ್ಷೆ ಮಲ್ಲಿಕಾ ವಿ.ಶೆಟ್ಟಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಅಲ್ವಿನ್ ವಿನಯ ಲೋಬೋ, ನಿರ್ದೇಶಕರುಗಳಾದ ಪದ್ಮನಾಭ ರಾವ್, ಬಿ.ಸುರೇಶ್ ಭಂಡಾರಿ, ಥೋಮಸ್ ಲ್ಯಾನ್ಸಿ ಸಲ್ದಾನ, ಪೂರ್ಣಿಮಾ ಬೆದ್ರಗುಡ್ಡೆ, ಅನಿಲ್ ಪಿಂಟೋ, ರಮೇಶ್, ಪ್ಲೋಸಿ ಡಿ.ಸೋಜ, ಶ್ರೀಮತಿ ಪೂರ್ಣಿಮಾ ಕೆಂಪುಗುಡ್ಡೆ ಮುಖ್ಯ ಕಾರ್ಯ ನಿರ್ವಹಣಾದಿಕಾರಿ ಅಜಯ್ ಕುಮಾರ್ ಅಜಿಲ ಸಿಬ್ಬಂದಿಗಳಾದ ರೇಣುಕಾ ರೈ, ಐತ್ತಪ್ಪ ಸಪಲ್ಯ, ದಿನೇಶ್ ಅಮೀನ್, ನಾಗೇಶ್ ಜೋಗಿ ಮತ್ತಿತರರು ಉಪಸ್ಥಿತರಿದ್ದರು.