ಬಂಟ್ವಾಳ: ಮಾಜಿ ಸಚಿವ ರಮಾನಾಥ ರೈ ಅವರ ಹುಟ್ಬುಹಬ್ಬದ ಪ್ರಯುಕ್ತ ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಸಭಾಂಗಣ, ಇರ್ವತ್ತೂರಿನಲ್ಲಿ   ಬಂಟ್ವಾಳ,ಪಾಣೆಮಂಗಳೂರು ಉಭಯ ಬ್ಲಾಕ್ ಗಳ ಸಹಿತ  ಕಾಂಗ್ರೆಸ್ ಕಾರ್ಯಕರ್ತರು ಆಯೋಜಿಸಿದ್ದ ರಕ್ತದಾನ ಶಿಬಿರ ಹಾಗೂ ಅಭಿನಂದನಾ ಸಮಾರಂಭದಲ್ಲಿ ರೈ ಅವರನ್ನು ಅಭಿನಂದಿಸಲಾಯಿತು.FB_IMG_1600003995709
ಈ ಸಂದರ್ಭ ಮಾತನಾಡಿದ ರೈ ರಕ್ತದಾನ ಶಿಬಿರ ಆಯೋಜಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿ, ಮನುಷ್ಯನ ರಕ್ತವೆಲ್ಲವೂ ಒಂದೇ, ಮನುಷ್ಯನನ್ನು ಯಾವುದೇ ಜಾತಿ, ಧರ್ಮ ಎಂಬ ತಾರತಮ್ಯ ಎಂದು ನೋಡದೆ ಪ್ರೀತಿಸುವ ತನ್ನ ಜನ್ಮದಿನಕ್ಕೆ ರಕ್ತದಾನ ಏರ್ಪಡಿಸಿರುವುದು ಸಂತಸದ ವಿಚಾರ ಎಂದರು.IMG-20200913-WA0110
ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ ಎಂ.ಚಂದ್ರಶೇಖರ ಪೂಜಾರಿ, ಮನಪಾ ಸದಸ್ಯ ಎಂ.ಶಶಿಧರ್ ಹೆಗ್ಡೆ, ಜಿ.ಪಂ.ಸದಸ್ಯರಾದ ಮಂಜುಳಾ ಮಾವೆ, ಶಾಹುಲ್ ಹಮೀದ್, ಬಂಟ್ವಾಳ ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಸದಸ್ಯೆ ನಸೀಮಾ ಬೇಗಂ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪುರಸಭಾ ಸದಸ್ಯ ಲುಕ್ಮಾನ್ ಬಂಟ್ವಾಳ, ಬಂಟ್ವಾಳ ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಪದ್ಮನಾಭ ರೈ, ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಶೆರಿಲ್ ಐಯೊನಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಜಯಂತಿ ಪೂಜಾರಿ, ಫ್ಲೋಸಿ ಡಿಸೋಜ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಕಾರ್ಯಕರ್ತರಿಗೆ ಗೌರವಾರ್ಪಣೆ, ಅಗಲಿದ ನಾಯಕರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಇಂಟಕ್ ಮುಖಂಡ, ಬಂಟ್ವಾಳ ಯುವ ಕಾಂಗ್ರೆಸ್ ಉಪಾಧ್ಯಕ್ಷ ಚಿತ್ತರಂಜನ್ ಶೆಟ್ಟಿ ಬೊಂಡಾಲ ಸ್ವಾಗತಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರ್ವಹಿಸಿದರು.ಇದಕ್ಕು ಮುನ್ನ ರೈ ಅವರು ತಮ್ಮ ನಿವಾಸದಲ್ಲಿ  ಸಿಬ್ಬಂದಿಗಳ ಜೊತೆ ಹುಟ್ಟುಹಬ್ಬ ಆಚರಿಸಿ  ಸಂತಸ ಹಂಚಿಕೊಂಡರು.

By suddi9

Leave a Reply

Your email address will not be published. Required fields are marked *