ಬಂಟ್ವಾಳ : 2018ರ ವಿಧಾನಸಭಾ ಚುಣಾವಣೆಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ವಿಜಯಕ್ಕಾಗಿ ಬಿಜೆಪಿ ಮುಖಂಡ ಶ್ರೀಕಾಂತ್ ಶೆಟ್ಟಿ ಸಜೀಪ ಅವರು ಕಾರುಣಿಕದ ಕ್ಷೇತ್ರ ಪಣೋಲಿಬೈಲು ಕಲ್ಲುರ್ಟಿಗೆ ಕೋಲ ಸೇವೆಯ ಹರಕೆ ಹೇಳಿಕೊಂಡಿದ್ದು, ಅವರ ಇಷ್ಟಾರ್ಥ ನೆರೆವೇರಿದ ಹಿನ್ನಲೆಯಲ್ಲಿ ಭಾನುವಾರ ಸಂಜೆ ಶ್ರೀ ಕ್ಷೇತ್ರ ಪಣೋಲಿಬೈಲಿನಲ್ಲಿ ಹರಕೆಯ ಕೋಲವು ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಶಾಸಕರಾದ ರಾಜೇಶ್ ನಾಯ್ಕ್ ,ಜಿಪಂ ಸದಸ್ಯ ರವೀಂದ್ರಕಂಬಳಿ,ಪಕ್ಷದ ಪ್ರಮುಖರಾದ ಡೊಂಬಯ್ಯ ಅರಳ,ರಾಧಾಕೃಷ್ಣ ಆಳ್ವ,ಶ್ರೀಕಾಂತ್ ಶೆಟ್ಟಿ ಸಜೀಪ,ಪವನ್ ಕುಮಾರ್ ಹಾಗೂ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. 