ಬಂಟ್ವಾಳ: ತಾಲ್ಲೂಕಿನಲ್ಲಿ ಸುಮಾರು 4,500 ಮಂದಿ ಮಾತ್ರ ಕೋವಿಡ್ ಪರೀಕ್ಷೆ ನಡೆಸಿದ್ದು, ಇದು ಹರಡದಂತೆ ತಡೆಯಲು ಪರೀಕ್ಷೆ ಹೆಚ್ಚಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕಕರ್ೇರ ಅಧಿಕಾರಿಗಳಿಗೆ ಸೂಚಿಸಿದರು. ಇಲ್ಲಿನ ಬಿ.ಸಿ.ರೋಡು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಮಾಸಿಕೆ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಮಾಹಿತಿ ನೀಡಿ, ಪ್ರಥಮ ಹಂತದ ಶಿಬಿರದಲ್ಲಿ ಶೇ 10ರಷ್ಟು ಮಂದಿ ಪರೀಕ್ಷೆ ನಡೆಸಿದ್ದಾರೆ ಎಂದರು.7btl-KDP

ಜಾನುವಾರು ಸಾಗಾಟಕ್ಕೆ ಪಶು ಸಂಗೋಪನಾ ಇಲಾಖೆಯ ಹೋಬಳಿ ಮಟ್ಟದ ಅಧಿಕಾರಿಗಳ ಅನುಮತಿ ಅಗತ್ಯವಾಗಿದೆ ಎಂದು ಇಲಾಖೆಯ ಅಧಿಕಾರಿ ಉತ್ತರಿಸಿದರು. ತುಂಬೆ ತೋಟಗಾರಿಕಾ ಇಲಾಖೆ ಜಮೀನು ಕಂದಾಯ ಇಲಾಖೆಗೆ ವಗರ್ಾಯಿಸುವ ಬಗ್ಗೆ ತೋಟಗಾರಿಕಾ ಸಹಾಯಕ ನಿದರ್ೇಶಕ ಪ್ರದೀಪ್ ಡಿಸೋಜ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಸ್ಥಳೀಯಾಡಳಿತದಿಂದ ನಿರಪೇಕ್ಷಣಾ ಪತ್ರ ಅಗತ್ಯವಿದೆ ಎಂದು ತಹಶೀಲ್ದಾರ್ ರಶ್ಮಿ ಎಸ್.ಆರ್. ತಿಳಿಸಿದರು.

ಚೆನ್ನೈತ್ತೋಡಿ ಗ್ರಾಮ ಪಂಚಾಯಿತಿನಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿಮರ್ಿಸಲು 20 ಸೆಂಟ್ಸ್ ಗೆ ಬದಲಾಗಿ ಕನಿಷ್ಟ ಅರ್ಧ ಎಕರೆ (50 ಸೆಂಟ್ಸ್) ಜಮೀನು ಅಗತ್ಯವಿದೆ ಎಂದು ಆಡಳಿತಾಧಿಕಾರಿ ಮನವಿ ಮಾಡಿದರು.ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ವಿ.ಶೆಟ್ಟಿ ಇದ್ದರು.

By suddi9

Leave a Reply

Your email address will not be published. Required fields are marked *