ಬಂಟ್ವಾಳ:ತಾಲ್ಲೂಕಿನ ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಮತ್ತು ಕನರ್ಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಇದೇ 17ರಿಂದ 19ರತನಕ ‘ತುಳು ನಾಟಕ ನಟನೆ ಬಗ್ಗೆ ತರಬೇತಿ ಕಮ್ಮಟ’ ಏರ್ಪಡಿಸಲಾಗಿದೆ.
ಹಿರಿಯ ರಂಗ ಕಲಾವಿದ ಡಿ.ಎಸ್.ಬೋಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದು, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್ ಅಧ್ಯಕ್ಷತೆ ವಹಿಸುವರು. ಪಿಲಾತಬೆಟ್ಟು ಗ್ರಾ.ಪಂ. ಪಿಡಿಒ ಧರ್ಮಪಾಲ ಪೂಜಾರಿ, ಮಿತ್ರ ಮಂಡಳಿ ಅಧ್ಯಕ್ಷ ಸಂತೋಷ್ ಮೂಜರ್ೆ, ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ., ಉಪನ್ಯಾಸಕ ಚೇತನ್ ಸೋಮೇಶ್ವರ, ಹಿರಿಯ ಕಲಾವಿದ ಪಿ.ಕೆ.ಟೈಲರ್, ಗ್ರಾ.ಪಂ.ಸದಸ್ಯ ಚಂದ್ರಶೇಖರ ಶೆಟ್ಟಿ ಮತ್ತಿತರರು ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.