ಬೆಂಗಳೂರು:ನವಂಬರ್ 14, ಭಾರತದಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳಿಗೆ ಪರ್ಯಾಯವಾಗಿ ಕಲ್ಯಾಣ ಭಾರತದ ವಾಗ್ದಾನದೊಂದಿಗೆ ಆರಂಭವಾದ ಮೌಲ್ಯಾಧಾರಿತ ರಾಜಕೀಯ ಪಕ್ಷವಾದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಕರ್ನಾಟಕ ಆನ್ ಆನ್ಲೈನ್ ಸದಸ್ಯತ್ವ ಅಭಿಯಾನವನ್ನು ಪಕ್ಷದ ರಾಜ್ಯಾದ್ಯಕ್ಷರಾದ ಅಡ್ವಕೇಟ್ ತಾಹಿರ್ ಹುಸೇನ್ ರವರು ಇಂದು ಬೆಂಗಳೂರಿನಲ್ಲಿ ಉದ್ಘಾಟನೆ ಮಾಡಿದರು.

ಅವರು ಮಾತನಾಡುತ್ತಾ ಭಾರತದಲ್ಲಿ ಸುಮಾರು 2300 ನೋಂದಾಯಿತ ರಾಜಕೀಯ ಪಕ್ಷಗಳಿವೆ.ಕೆಲವು ಪಕ್ಷಗಳು ಜಾತಿ ಆಧಾರಿತವಾದರೆ,ಕೆಲವು ಕೋಮು ಆಧಾರಿತ ಪಕ್ಷಗಳಾಗಿವೆ.ಕೆಲವು ಕುಟುಂಬ ಆಧಾರಿತವಾದರೆ ಇನ್ನು ಕೆಲವು ಸ್ವಪ್ರತಿಷ್ಠೆಗಾಗಿ ಹುಟ್ಟಿಕೊಂಡ ಪಕ್ಷಗಳಾಗಿವೆ.
ಹೀಗೆ ಹಲವು ಕಾರಣಗಳಿಗಾಗಿ ಹುಟ್ಟಿಕೊಂಡ ಪಕ್ಷಗಳಿಗೆ ದೇಶದ ಅಭಿವೃದ್ಧಿ ಮುಖ್ಯವಾಗಿರಲಿಲ್ಲ.ಸ್ವಾತಂತ್ರ್ಯ ಸಿಕ್ಕಿ ಏಳು ದಶಕಗಳು ಕಳೆದರೂ ಬಡತನ,ನಿರುದ್ಯೋಗ, ಕೆಲವರ್ಗದವರ ಮೇಲೆ ದೌರ್ಜನ್ಯ, ಹೀಗೆ ಹಲವಾರು ಸಮಸ್ಯೆ ಗಳು ಇನ್ನು ಕಾಡುತ್ತಿವೆ, ಕೇವಲ ಕೈ ಬದಲಾವಣೆ ಆಗಿದೆ ಹೊರತು ಆಡಳಿತ ಶೈಲಿ ಯಲ್ಲಿ ಬದ್ಲಾವಣೆ ಯಾಗಿಲ್ಲ . ಇವೆಲ್ಲವುಗಳಿಂದ ಜನರಿಗೆ ಬೇಸರ ಹುಟ್ಟಿದೆ.
ಜನಸಾಮಾನ್ಯರಿಗೆ ರಾಜಕೀಯ ಪಕ್ಷಗಳೆಂದರೆ ಒಂದು ತರಹ ಅಲರ್ಜಿಯಾಗತೊಡಗಿದೆ.ಇಂತಹ ಸಂಧರ್ಭದಲ್ಲಿ, ರಾಜಕೀಯದಲ್ಲಿ ಮೂಲ್ಯ ದೊಂದಿಗೆ, ಭಾರತದ ಆರು ಸಾವಿರ ಗ್ರಾಮಗಳನ್ನು ಕಲ್ಯಾಣ ಗ್ರಾಮ ಮಾಡುವ ಕನಸಿನೊಂದಿಗೆ ಹುಟ್ಟಿಕೊಂಡ ಪಕ್ಷವಾಗಿದೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ.ಈಗಾಗಲೇ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ವೆಲ್ಫೇರ್ ಪಕ್ಷದಿಂದ ಆರಿಸಿ ಬಂದಿರುವ ಸದಸ್ಯರು ತಮ್ಮ ವಾರ್ಡ್ ಗಳ್ಳನು ಮಾದರಿ ವಾರ್ಡನ್ನಾಗಿ ಮಾಡಿದ್ದಾರೆ ಎನ್ನುವುದು ವಾಸ್ತವವಾಗಿದೆ. ಆದ್ದರಿಂದ ವೆಲ್ಫೇರ್ ಪಕ್ಷದ ಕಲ್ಯಾಣ ಭಾರತದ(Welfare state) ಕನಸನ್ನು ನನಸಾಗಿಲು ಈ ಪಕ್ಷವನ್ನು ಬೆಂಬಲಿಸಿ ಇದರ ಸದಸ್ಯರಾಗಬೇಕೆಂದು ಅವರು ಮನವಿ ಮಾಡಿದರು.