ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಚೆನ್ನೈತ್ತೋಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ  ವಿವಿಧ ಅನುದಾನಗಳ ಮೂಲಕ ೩ ಕೋಟಿ  ರೂ.  ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಹೇಳಿದ್ದಾರೆ.ಸೋಮವಾರ ಚೆನ್ನೈತ್ತೋಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು ೧.೩೧ ಕೋ.ರೂ ವೆಚ್ಚದಲ್ಲಿ   ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಿ  ಅವರು ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ  ಬಂದ ಬಳಿಕ  ವಿವಿಧ ಯೋಜನೆಯಡಿ ಬಂಟ್ವಾಳ  ಕ್ಷೇತ್ರಕ್ಕೆ ಗರಿಷ್ಠ ಅನುದಾನ ದೊರಕಿದ್ದು, ಶಾಸಕನಾಗಿ ವಿಶೇಷ ಮುತುವರ್ಜಿಯಿಂದ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವುದಾಗಿ ಹೇಳಿದರು.IMG-20201116-WA0076

ಶಿಲಾನ್ಯಾಸ: ೫ ಲಕ್ಷ ರೂ. ವೆಚ್ಚದ ಅಜ್ಜಿಬೆಟ್ಟು ಗ್ರಾಮದ ಮೂಡಾಯಿಬೆಟ್ಟು  ಕಾಂಕ್ರಿಟ್ ರಸ್ತೆ ಕಾಮಗಾರಿ, ೫ ಲಕ್ಷ ರೂ. ವೆಚ್ಚದ ಚೆನ್ನೈತ್ತೋಡಿ ಗ್ರಾಮದ ಅಂತರಗುತ್ತು ರಸ್ತೆ ,೧೫ ಲಕ್ಷ ರೂ. ವೆಚ್ಚದ  ಚೆನ್ನೈತ್ತೋಡಿ ಗ್ರಾಮದ ಕೊರ್ಲೋಡಿ ರಸ್ತೆ,  ೫ ಲಕ್ಷ ರೂ. ವೆಚ್ಚದ ಅಜ್ಜಿಬೆಟ್ಟು ಗ್ರಾಮದ ಪರಾರಿ ರಸ್ತೆ , ೬ ಲಕ್ಷ ರೂ. ವೆಚ್ಚದ ಅಜ್ಜಿಬೆಟ್ಟು ಗ್ರಾಮದ ಪಾಲೆದಡಿ ರಸ್ತೆ, ೫ ಲಕ್ಷ ರೂ. ವೆಚ್ಚದ  ಅಜ್ಜಿಬೆಟ್ಟು ಗ್ರಾಮದ ಶ್ರೀ ನೀಲಕಂಠೇಶ್ವರ ದೇವಸ್ಥಾನದ ರಸ್ತೆ ಅಭಿವೃದ್ಧಿ ಕಾಮಗಾರಿಗೆ  ಶಾಸಕರು ಶಿಲಾನ್ಯಾಸ ನೆರವೇರಿಸಿದರು.

IMG-20201116-WA0080
ಉದ್ಘಾಟನೆ: ೨೫ ಲ.ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಚೆನ್ನೈತ್ತೋಡಿ ಗ್ರಾಮದ ಮಾವಿನಕಟ್ಟೆ-ಪೂಂಜ  ಕಾಂಕ್ರೀಟ್ ರಸ್ತೆ, ೫ ಲಕ್ಷ ರೂ. ವೆಚ್ಚದ ಪಿಲಿಮೊಗರು ಗ್ರಾಮದ ಬೊಳ್ಳಾಜೆ ಕಾಂಕ್ರೀಟ್ ರಸ್ತೆ ,೧೫ ಲ. ರೂ ವೆಚ್ಚದ  ಕೊಡಂಬೆಟ್ಟು ಗ್ರಾಮದ ಕುಂಟಾಲಪಲ್ಕೆ ರಸ್ತೆ , ೧೦ ಲಕ್ಷ  ರೂ. ವೆಚ್ಚದ ಕೊಡಂಬೆಟ್ಟು ಗ್ರಾಮದ ಪೊರಿಗುಡ್ಡೆ ರಸ್ತೆ, ೫ ಲಕ್ಷ ರೂ. ವೆಚ್ಚದ ಪಿಲಿಮೊಗರು ಗ್ರಾಮದ ಪಂಜೊಟ್ಟು ರಸ್ತೆ, ೨೦ ಲಕ್ಷ ರೂ. ವೆಚ್ಚದ ಕೊಡಂಬೆಟ್ಟು ಗ್ರಾಮದ ಮುಖ್ಯಪ್ರಾಣ ದೇವಸ್ಥಾನ-ಉರುಡಾಯಿ ರಸ್ತೆ ಕಾಮಗಾರಿಗಳನ್ನು ಶಾಸಕರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ,ರಾಜ್ಯ ನಗರ ನೀರು ಸರಬರಾಜು ಒಳಚರಂಡಿ ಮಂಡಳಿ ನಿರ್ದೇಶಕಿ ಸುಲೋಚನಾ ಜಿ.ಕೆ.ಭಟ್,  ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರ.ಕಾರ್ಯದರ್ಶಿ ಡೊಂಬಯ್ಯ ಅರಳ,ಪ್ರಮುಖರಾದ ಸೀತಾರಾಮ ಪೂಜಾರಿ, ಪುರುಷೋತ್ತಮ ಶೆಟ್ಟಿ ವಾಮದಪದವು, ರಮಾನಾಥ ರಾಯಿ, ಗಣೇಶ್ ರೈ ಮಾಣಿ, ಗೋಪಾಲಕೃಷ್ಣ ಚೌಟ, ಜಯರಾಮ ಶೆಟ್ಟಿ ಕಾಪು, ಪ್ರಭಾಕರ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ನಾಗರಾಜ ಶೆಟ್ಟಿ, ಮಂಜುನಾಥ ನಾಯಕ್, ಗಂಗಾಧರ ಪೂಜಾರಿ, ಮೋಹನದಾಸ ಗಟ್ಟಿ, ವಿಜಯ ರೈ, ದಿನೇಶ್ ಶೆಟ್ಟಿ ದಂಬೆದಾರ್, ಪ್ರಕಾಶ್ ಶೆಟ್ಟಿ ಕಕ್ಕಿಬೆಟ್ಟು, ಸಂಜೀವ ಶೆಟ್ಟಿ ಗುಂಡ್ಯಾರ್, ಪ್ರಶಾಂತ್ ಶೆಟ್ಟಿ, ರವಿರಾಮ ಶೆಟ್ಟಿ, ಭೋಜರಾಜ ಶೆಟ್ಟಿ, ಬೇಬಿ ಗೌಡ, ಉಮೇಶ್ ಶೆಟ್ಟಿ, ಲೋಕನಾಥ  ಮಡಿವಾಳ,ಯಶಸ್ ರೈ, ಕಮಲ್ ಶೆಟ್ಟಿ ಬೊಳ್ಳಾಜೆ, ವಾಸು, ಲೋಕೇಶ್ ಶೆಟ್ಟಿ,ನಾರಾಯಣ ಪೂಜಾರಿ, ವೀರೇಂದ್ರ ಪೂಜಾರಿ, ವೆಂಕಪ್ಪ ಶೆಟ್ಟಿ, ಜಗನ್ನಾಥ ಶೆಟ್ಟಿ, ಪ್ರಕಾಶ್ ಶೆಟ್ಟಿ ಹರ್ಕಾಡಿ, ಪ್ರಶಾಂತ್ ಮಡಿವಾಳ, ರಾಮ ಮಡಿವಾಳ, ಸುನಿಲ್ ರೈ, ವಿನೋದ್ ಪೂಜಾರಿ, ಪ್ರಣಾತ್ ಶೆಟ್ಟಿ ಮತ್ತಿತರರಿದ್ದರು.

By suddi9

Leave a Reply

Your email address will not be published. Required fields are marked *