ಬಂಟ್ವಾಳ: ಹಿಂದು ಜಾಗರಣ ವೇದಿಕೆ ಕಡೇಶಿವಾಲಯ ಹಾಗೂ ಶ್ರೀ ರಾಮ ಭಜನಾ ಮಂದಿರ ಪ್ರತಾಪನಗರ ಆಶ್ರಯದಲ್ಲಿ ನಡೆದ ಬೆಳಕಿನ ಹಬ್ಬ,ಗೋಪೂಜೆ,ತುಳಸಿ ಪೂಜೆ,ಭಾರತಮಾತಾ ಪೂಜನಾ,ಧಾರ್ಮಿಕ ಸಭೆ ಹಾಗೂ ಸನ್ಮಾನ ಸಮಾರಂಭ ಕಣ್ಮನ ಸೆಳೆಯಿತು.ಸುತ್ತಲೂ ನೂರಾರು ಹಣತೆಗಳು.ತೂಗುಯ್ಯಾಲೆಯಲ್ಲಿ ವಿರಾಜಮಾನಳಾಗಿದ್ದ ಭಾರತಾಂಭೆ, ಗೋಮಾತೆಯ ಪೂಜೆ,ತುಳಸಿಪೂಜೆಯ ಬಳಿಕ ನಡೆದ ಧರ್ಮಸಭೆಯ ಅಧ್ಯಕ್ಷತೆಯನ್ನು ಶಾರದಾ ದಾಮೋದರ ಆಚಾರ್ಯ ವಹಿಸಿದ್ದರು. 
ಧಾರ್ಮಿಕ ಚಿಂತಕ ಶ್ರೀಕೃಷ್ಣ ಉಪಾಧ್ಯಾಯರು ಧಾರ್ಮಿಕ ಉಪನ್ಯಾಸಗೈದರು.ಇದೇ ವೇಳೆ ಕರ್ನಾಟಕ ಕ್ರೀಡಾರತ್ನ ಕಡೇಶಿವಾಲಯದ ಪ್ರತಿಭೆ ಕು.ಜಯಲಕ್ಷ್ಮಿ ರವರನ್ನು ಸನ್ಮಾನಿಸಲಾಯಿತು. ಈ ಸಂಪೂರ್ಣ ಕಾರ್ಯಕ್ರಮ ಕೇವಲ ದೀಪದ ಬೆಳಕಿನಿಂದ ನಡೆದಿದ್ದು ಎಲ್ಲರನ್ನೂ ದೀಪಾವಳಿಯ ಹೊಸ ಲೋಕಕ್ಕೆ ಕರೆದೊಯಿತು. ಊರಿನ ಪ್ರಮುಖರು, ಹಿರಿಯರು ಹಾಗೂ ಕಾರ್ಯಕರ್ತರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ಹಿಂ.ಜಾ.ವೇ ಅಧ್ಯಕ್ಷ ಗೋಪಾಲಕೃಷ್ಣ ನಾಯಕ್ ಸ್ವಾಗತಿಸಿದರು.ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಭಾಸ್ಕರ ಮುಂಡಾಲ ವಂದಿಸಿದರು. ದುರ್ಗಾಪ್ರಸಾದ್ ಅಮೈ ಕಾರ್ಯಕ್ರಮವನ್ನು ನಿರೂಪಿಸಿದರು. ಸೆಲ್ಫೀ ವಿಥ್ ಜ್ಞಾನದೀವಿಗೆ ಇದೇ ಶುಕ್ರವಾರ 20 ರಂದು ಮುಕ್ತಾಯಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.