ಬಂಟ್ವಾಳ:ದೇಶದಲ್ಲಿ ಜೀವ ವಿಮೆ ಮೂಲಕ ನಾಗರಿಕರಲ್ಲಿ ಉಳಿತಾಯ ಮನೋಭಾವ ಬೆಳೆಸುವುದರ ಜೊತೆಗೆ ಕೇಂದ್ರ ಸಕರ್ಾರ ಕೈಗೊಳ್ಳುವ ವಿವಿಧ ಮೂಲಭೂತ ಸೌಕರ್ಯ ಒದಗಿಸುವ ಯೋಜನೆಗಳಿಗೆ ಆಥರ್ಿಕ ನೆರವು ನೀಡುತ್ತಿರುವ ಪ್ರಾಮಾಣಿಕ ಸಂಸ್ಥೆಯಾಗಿ ಭಾರತೀಯ ಜೀವ ವಿಮಾ ನಿಗಮ ಗುರುತಿಸಿಕೊಂಡಿದೆ ಎಂದು ದಾವಣಗೆರೆ ಎಲ್ಲೈಸಿ ಶಾಖೆ ಅಭಿವೃದ್ಧಿ ಅಧಿಕಾರಿ ಶ್ರೀಕಾಂತ್ ಭಟ್ ಹೇಳಿದ್ದಾರೆ. ಇಲ್ಲಿನ ಬಿ.ಸಿ.ರೋಡು ಭಾರತೀಯ ಜೀವ ವಿಮಾ ನಿಗಮ ಶಾಖೆಯಲ್ಲಿ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಕಲ್ಮಾಡಿ ನೇತೃತ್ವದ ಪ್ರತಿನಿಧಿಗಳ 21ನೇ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

24btl-LIC (1)

ಮುಖ್ಯ ಶಾಖಾಧಿಕಾರಿ ಪಿ.ಸಿ.ನಾಯಕ್ ಒರಿಸ್ಸಾ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪ ಶಾಖಾಧಿಕಾರಿ ಸುಂದರ ಮೇರ ಜೀವ ವಿಮೆ ಪ್ರಾಮುಖ್ಯತೆ ಬಗ್ಗೆ ವಿವರಿಸಿದರು.
ಇದೇ ವೇಳೆ ಸಾಧಕ ಪ್ರತಿನಿಧಿಗಳು ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಉಪ ಶಾಖಾಧಿಕಾರಿ ಶ್ರೀಪಾದ್, ಸಮಿತಿ ಸಂಚಾಲಕ ಪ್ರಶಾಂತ್ ಕೊಟ್ಯಾನ್, ನಿವೃತ್ತ ಶಿಕ್ಷಕ ಮಹಾಬಲ ಆಳ್ವ ಮತ್ತಿತರರು ಇದ್ದರು. ಇದೇ ವೇಳೆ ಸಾಧಕ ಪ್ರತಿನಿಧಿಗಳು ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಬಿ.ಕಲ್ಮಾಡಿ ಪ್ರಾಸ್ತಾವಿಕ ಮಾತನಾಡಿದರು. ಪ್ರತಿನಿಧಿ ನವೀನ್ ಕೊಡ್ಮಾನ್ ವರದಿ ವಾಚಿಸಿದರು. ಮೋಹನ್ ಕೆ.ಶ್ರೀಯಾನ್ ರಾಯಿ ಸ್ವಾಗತಿಸಿ, ರಾಜಾ ಬಂಟ್ವಾಳ್ ವಂದಿಸಿದರು. ಭವಾನಿ ನಾರಾಯಣ ಮತ್ತು ಶ್ರೀಜ ಶಾಲಿನಿ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *