ಸುದ್ದಿ9ಕುಂದಾಪುರ: ಮಂಗಳವಾರ ಸಂಜೆ ಇಲ್ಲಿನ ಪಂಚಗಂಗಾವಳಿ ನದಿಯಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾದ ಸ್ಥಳೀಯ ಮೀನುಗಾರ ಪ್ರಮೋದ್ ಕುಮಾರ್ (22) ಎಂಬ ಯುವಕನ ಸಾವು ಅಕಸ್ಮಿಕವಲ್ಲ ಇದೊಂದು ವ್ಯವಸ್ಥಿತ ಕೊಲೆ ಹಾಗೂ ಇದರ ಹಿಂದೆ ಮರಳು ಮಾಫಿಯಾ ಕೈ ಇದೆ ಎಂದು ಆರೋಪಿಸಿ ಮೃತರ ಕಡೆಯವರು ಹಾಗೂ ಸ್ಥಳೀಯರು ಬುಧವಾರ ಮಧ್ಯಾಹ್ನ ನಗರದ ಶಾಸ್ತ್ರಿವೃತ್ತದ ಬಳಿ ರಸ್ತೆಯಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದು ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನೆಲೆಗೊಂಡಿತ್ತು.
ನಗರದ ಮೇಲ್ ಖಾವರ್ಿಕೇರಿಯ ನಿವಾಸಿ ಗಣಪತಿ ಖಾವರ್ಿ ಅವರ ಪುತ್ರ ಪ್ರಮೋದ್ ಕುಮಾರ್ ಸೋಮವಾರ ರಾತ್ರಿ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದು ಆತ ಮನೆಗೆ ಹಿಂತಿರುಗಿ ಬಾರದ ಹಿನ್ನಲೆಯಲ್ಲಿ ಮನೆಯವರು ಹುಡುಕಾಟ ನಡೆಸಿದ್ದರು. ಮಂಗಳವಾರ ಸಂಜೆ 5.30ರ ಹೊತ್ತಿಗೆ ಕೆಳಖಾವರ್ಿಕೇರಿಯ ರಿಂಗ್ ರೋಡ್ನ ಉತ್ತರ ದಿಕ್ಕಿನಲ್ಲಿ ಆತನ ಶವ ಪತ್ತೆಯಾಗಿತ್ತು. ಇದೊಂದು ಅನುಮಾನಸ್ಪದ ಸಾವು ಎಂದು ಮೃತ ವ್ಯಕ್ತಿಯ ತಂದೆ ಪೊಲೀಸರಿಗೆ ದೂರು ನೀಡಿದ್ದರು ಹಾಗೂ ಸ್ಥಳೀಯರು ಇದು ವ್ಯವಸ್ಥಿತ ಕೊಲೆ ಪ್ರಕರಣ ಎಂದು ಆರೋಪಿಸಿದ್ದರು. ಈ ಹಿನ್ನಲೆಯಲ್ಲಿ ಪೊಲೀಸರು ಮೃತದೇಹದ ಮರಣೋತ್ತಯರ ಪರೀಕ್ಷೆಯನ್ನು ಮಣಿಪಾಲ ಆಸ್ಪತ್ರೆಗೆ ಕಳುಹಿಸಿದ್ದರು.
ಮರಣೋತ್ತರ ಶವ ಪರೀಕ್ಷೆ ಆದ ಬಳಿಕ ಕುಂದಾಪುರಕ್ಕೆ ಶವವನ್ನು ತರುತ್ತಿದ್ದ ವೇಳೆಯಲ್ಲಿ ನಗರದ ಶಾಸ್ತ್ರ ವೃತ್ತದ ಬಳಿಯಲ್ಲಿ ಶವದ ವಾಹನವನ್ನು ನಿಲ್ಲಿಸಿ ಮೃತದೇಹವನ್ನು ರಸ್ತೆಯ ಮೇಲಿರಿಉಸಿ ಪ್ರತಿಭಟನೆ ನಡೆಸಿದ ಅವರ ಬಂಧು ಮಿತ್ರರು, ಸ್ನೇಹಿತರು ಮರಳುಗಾರಿಕೆ ಸಂಬಂಧವಾಗಿ ಈ ಕೊಲೆ ನಡೆದಿದೆ ಅಲ್ಲದೇ ಮೃತಪಟ್ಟ ದಿನ ಮರಳು ಮಾಫಿಯಾದವರೊಂದಿಗೆ ಜಗಳ ನಡೆದಿದೆ ಎನ್ನುವ ಮಾಹಿತಿ ಇದೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಪ್ರಮೋದ್ ಅವರ ತಾಯಿ ನೀಡಿದ ದೂರನ್ನು ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯ ಕಾವು ಹೆಚ್ಚುತ್ತಿದ್ದ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಕಸಿದ ಕುಂದಾಪುರ ಉಪ ವಿಬಾಗದ ಡಿವೈಎಸ್ಪಿ ಸಿ.ಬಿ.ಪಾಟೀಲ್ ಹಾಗೂ ವೃತ್ತ ನಿರೀಕ್ಷಕ ದಿವಾಕರ್ ಎಂ.ಪಿ. ಅವರು ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ನಡೆಸಿದರು. ಈ ಸಮಯದಲ್ಲಿ ಮಾತನಾಡಿದ ಅವರು ಪ್ರಮೋದ್ ಕುಮಾರ್ ಅವರ ತಂದೆ ನೀಡಿದ ದೂರಿನ ಆಧಾರದಲ್ಲಿ ಮಂಗಳವಾರವೇ ಪ್ರಕರಣದ ತನಿಖೆಯನ್ನು ನಡೆಸಲಾಗುತ್ತಿದ್ದು ಇಂದು ಅವರ ತಾಯಿ ನೀಡಿರುವ ಹೇಳಿಕೆಗಳನ್ನು , ವೀಡಿಯೋ ದಾಖಲಾತಿಗಳೊಂದಿಗೆ ಸ್ವೀಕರಿಸಿಕೊಳ್ಳಲಾಗಿದೆ. ಈ ಆರೋಪಗಳನ್ನು ಗಮನದಲ್ಲಿಟ್ಟುಕೊಂಡು ತನಿಖೆಯನ್ನು ನಡೆಸುವ ಬಗ್ಗೆ ಭರವಸೆ ನೀಡಿದರು.
ಆದರೆ ಪಟ್ಟು ಬಿಡದ ಪ್ರತಿಭಟನಾಕಾರರು ಕುಮಾರ್ಗೆ ಹಲ್ಲೆ ನಡೆಸಿದ್ದಾರೆ ಎನ್ನಲಾದ ಕುರಿತು ಮಾತುಗಳು ಕೇಳಿ ಬರುತ್ತಿದ್ದು ಅವರ ತಾಯಿ ನೀಡಿದ ದೂರಿನಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಪೊಲೀಸ್ ಅಧಿಕಾರಿಗಳು ಆರೋಪಿತರ ವಿಚಾರಣೆ ನಡೆಸುವ ಕುರಿತು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು. ಶಾಸಕ ಹಾಲಾಡಿ ಭೇಟಿ: ಮೃತ ಪ್ರಮೋದ್ ಕುಮಾರ್ ಅವರ ಮನೆಗೆ ಸಂಜೆ ಶಾಸಕ ಹಾಲಕಾಡಿ ಶ್ರೀನಿವಾಸ ಶೆಟ್ಟಿ ಅವರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿದರು.
