ಬಂಟ್ವಾಳ: ಮದುವೆ ಹಾಲ್ ನಲ್ಲಿ ಮಹಿಳೆಯರ ಬ್ಯಾಗ್ ಮಕ್ಕಳ ಕತ್ತಿನಿಂದ ಚಿನ್ನಾಭರಣ ಎಗರಿಸುತ್ತಿದ್ದ ಕುಖ್ಯಾತ ಕಳ್ಳಿಯನ್ನು ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದು, ಆಕೆಯಿಂದ ಸುಮಾರು 234 ಗ್ರಾಂ ಚಿನ್ನವನ್ನು ವಶಪಡಿಸಿದ್ದಾರೆ. ಮುಡಿಪು ನಿವಾಸಿ ಸಿದ್ದೀಕ್ ಎಂಬವರ ಪತ್ನಿ ಫಾತಿಮಾ ಸಹಿನಾಜ್ ಬಂಧಿತ ಆರೋಪಿಯಾಗಿದ್ದಾಳೆ.

ಇತ್ತೀಚಿಗಿನ ದಿನಗಳಲ್ಲಿ ಮದುವೆ ಹಾಲ್ ಗಳಲ್ಲಿ ಮಹಿಳೆಯರ ಬ್ಯಾಗ್ ,ಚಿಕ್ಕ ಮಕ್ಖಳ ಕತ್ತಿನಿಂದ ಚಿನ್ನದಸರ ಕಳವಾಗುತ್ತಿರುವ ಬಗ್ಗೆ  ಹಾಲ್ ನ ಸಿಸಿ ಟಿವಿಯಲ್ಲಿ ಸೆರೆಯಾಗಿರುವ ದೃಶ್ಯವನ್ನು ಆಧರಿಸಿ ಹಾಲ್ ಮಾಲೀಕರು ಬಂಟ್ವಾಳ ನಗರ ಮತ್ತು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಗುರುವಾರ ಪಾಣೆಮಂಗಳೂರಿನ ಆಡಿಟೋರಿಯಂವೊಂದರಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಮಹಿಳೆಯೊಬ್ಬರು ಹೆಣ್ಣುಮಗುವೊಂದನ್ನು ಪುಸಲಾಯಿಸಿ ಆ ಮಗುವಿನ ಕತ್ತಿನಿಂದ ಚಿನ್ನದ ಸರ ಕಸಿಯಲು ಯತ್ನಿಸಿದಾಗ ಮಗು ಕಿರಿಚಿತ್ತು.ತಕ್ಷಣ ಅಲ್ಲಿ ಸೇರಿದ್ದವರು ಮಹಿಳೆಯನ್ನು ಹಿಡಿದು ಬಂಟ್ವಾಳ ನಗರ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದರು.

ಬಳಿಕ ಅಪರಾಧ ವಿಭಾಗದ ಎಸ್ ಐ ಕಲೈಮಾರ್ ಮತ್ತವರ ಸಿಬ್ಬಂದಿಗಳು  ಈ ಮಹಿಳೆಯ ವಿಚಾರಣೆ ನಡೆಸಿದಾಗ ಹಲವು ಮದುವೆ ಹಾಲ್ ನಲ್ಲಿ ಈ ಕೃತ್ಯ ನಡೆಸಿರುವುದನ್ನು ಬಾಯಿಬಿಟ್ಟಿದ್ದಳು ಎಂದು ತಿಳಿದು ಬಂದಿದೆ.

ನ.29 ಪಾಣೆಮಂಗಳೂರಿನ ಇದೇ ಹಾಲ್ ನಲ್ಲಿ ಸಿದ್ದೀಕ್ ಎಂಬವರ ಮಗುವಿನ ಕತ್ತಿನಿಂದ 14 ಗ್ರಾಂನ ಚಿನ್ನದ ಸರ ಕಸಿದಿರುವುದು ಪೊಲೀಸರ ತನಿಖೆಯಲ್ಲಿ ಬಯಲಿಗೆ ಬಂದಿದೆ.ಹಾಗೆಯೇ ತೊಕ್ಕೊಟ್ಟು,ಫರಂಗಿಪೇಟೆ,ಬಿ.ರೋಡಿನ ತಲಪಾಡಿಯಲ್ಲಿರುವ ಮದುವೆ ಹಾಲ್ ನಲ್ಲು ಕಳ್ಳತನ ನಡೆಸಿರುವುದನ್ನು ಆಕೆ ತನಿಖೆಯ ವೇಳೆ ಒಪ್ಪಿಕೊಂಡಿದ್ದಾಳೆನ್ನಲಾಗಿದೆ.

ಹೀಗೆ ಕಳವುಗೈದಿರುವ ಚಿನ್ನಾಭರಣವನ್ನು ಕರಗಿಸಿ ಹೊಸ ರೋಪನೀಡಿರುವ ಸುಮಾರು 234 ಗ್ರಾಂ ಚಿನ್ನವನ್ನು ಆರೋಪಿ ಫಾತಿಮಾಳಿಂದ ವಶಪಡಿಸಲಾಗಿದೆ.ಉಳಿದಂತೆ ಒಂದಷ್ಟು ಚಿನ್ನವನ್ನು  ಮಾರಾಟಮಾಡಿ ಬಂದಿರುವ ಹಣವನ್ನು ತನ್ನ ಬ್ಯಾಂಕ್ ಖಾತೆಯಲ್ಲಿ ಜಮಾ ಮಾಡಿದ್ದಾಳೆಂದು ತಿಳಿದು ಬಂದಿದೆ.ಕಳೆದ ೧೦ ವರ್ಷಗಳಿಂದ ಆಕೆ ಈ ಕೃತ್ಯದಲ್ಲಿ ತೊಡಗಿದ್ದಾಳೆ ಎಂದು ಪೊಲೀಸರ ತನಿಖೆಯ ವೇಳೆ ಬಯಲಿಗೆ ಬಂದಿದೆ.ಸದ್ಯಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು,ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಜಿಲ್ಲಾಎಸ್ಪಿ ಲಕ್ಷ್ಮೀನಾರಾಯಣ ಅವರ ಮಾರ್ಗದರ್ಶನ ,ಡಿವೈಎಸ್ಪಿ ವೆಲೆಂಟಿನ್ ಡಿಸೋಜ,ಇನ್ಸ್ ಪೆಕ್ಟರ್ ನಾಗರಾಜ್ ಅವರ ನಿರ್ದೇಶನದಂತೆ ಅಪರಾಧ ವಿಭಾಗದ ಎಸ್ ಐ ಕಲೈಮಾರ್ ಮತ್ತವರ ತಂಡ ಮುಂದಿನ ತನಿಖೆ ನಡೆಸುತ್ತಿದೆ.

By suddi9

Leave a Reply

Your email address will not be published. Required fields are marked *