ಬಂಟ್ವಾಳ : ಇಡೀ ಕುಟುಂಬದ ಆಧಾರವಾಗಿದ್ದ ಹೊಟೇಲ್ ಕಾರ್ಮಿಕ ನೋರ್ವ ಪ್ರಸ್ತುತ ಕಿಡ್ನಿ ವೈಫಲ್ಯದಿಂದ ಸಂಪೂರ್ಣ ನಲುಗಿ ಹೋಗಿದ್ದು, ವಾರಕ್ಕೆ  ಮೂರು ಡಯಾಲಿಸೀಸ್ ಚಿಕಿತ್ಸೆ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇವರ ಅನಾರೋಗ್ಯದಿಂದ ಕುಟುಂಬ ಆಹಾರಕ್ಕೂ ಪರದಾಡುವ ಜತೆಗೆ ಡಯಾಲಿಸೀಸ್ ಗೆ ಖರ್ಚು ಮಾಡಬೇಕಾದ ಸ್ಥಿತಿ ಇದ್ದು, ಹೀಗಾಗಿ ದಾನಿಗಳ ನೆರವು ಯಾಚಿಸಿದ್ದಾರೆ.ಪಾಣೆಮಂಗಳೂರಿನ ಮೊಗರ್ನಾಡು ನಿವಾಸಿ ೪೨ ವರ್ಷದ ಸತೀಶ್ ಯಾನೆ ಬಾಬಾ ಅವರ ಕುಟುಂಬದ ಚಿಂತಾಜನಕ ಸ್ಥಿತಿ ಇದು.¸sathish
ಸತೀಶ್ ಅವರು ಮನೆಯಲ್ಲಿ ಹಿರಿಯರಾಗಿದ್ದು,ಇಬ್ಬರು ತಮ್ಮಂದಿರು ಹಾಗೂ ಓರ್ವ ತಂಗಿ ಸೇರಿ ನಾಲ್ವರು ಮನೆಯಲ್ಲಿದ್ದಾರೆ. ತಮ್ಮಂದಿರು ಸಣ್ಣಪುಟ್ಟ ಕೆಲಸ ಮಾಡುತ್ತಿದ್ದು, ಮನೆಯ ಖರ್ಚು, ಅಣ್ಣನ ಔಷಧಿಗೆ ಅವರ ದುಡಿಮೆ ಸಾಲುತ್ತಿಲ್ಲ. ಸತೀಶ್ ಅವರಿಗೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ವಾರಕ್ಕೆ ಮೂರು ಡಯಾಲಿಸೀಸ್ ಆಗಬೇಕಿದೆ.
ಅನಾರೋಗ್ಯದ ಕಾರಣದಿಂದ ಬಸ್‌ನಲ್ಲಿ ಹೊಗುವುದಕ್ಕೂ ಪರದಾಡುತ್ತಿದ್ದಾರೆ. ಅವರ ಅನಾರೋಗ್ಯದ ಶಾಶ್ವತ ಪರಿಹಾರಕ್ಕೆ ಲಕ್ಷಾಂತರ ರೂಪಾಯಿ ಬೇಕಿರುವುದರಿಂದ ನೆರವು ನೀಡುವ ದಾನಿಗಳು ಸತೀಶ್ ಅವರ ಹೆಸರಿನಲ್ಲಿ ಕೆನರಾ(ಸಿಂಡಿಕೇಟ್) ಬ್ಯಾಂಕ್ ಶಂಭೂರು ಶಾಖೆಯ ಖಾತೆ ಸಂಖ್ಯೆ ೦೨೯೪೨೬೧೦೦೦೩೬೧೬(IಈSಅ-Sಙಓಃ೦೦೦೦೨೯೪) ಗೆ ತಮ್ಮ ನೆರವು ನೀಡಬಹುದಾಗಿದೆ.
ಸಂಪರ್ಕ:- ೬೩೬೩೩೭೭೪೦೫

By suddi9

Leave a Reply

Your email address will not be published. Required fields are marked *