ಮುಂಬಯಿ : (ಆರ್‌ಬಿಐ), ಜ.೨೭: ಸಮಾಜದಲ್ಲಿ ಯುವಕರು ಮುಂದೆ ಬಂದು ಸಮಾಜ ಮುಖಿಯಾಗಿಕೆಲಸ ಮಾಡಲು ಮನಸ್ಸು ಮಾಡಬೇಕು. ಕೇವಲ ತನಗಾಗಿ ಬದುಕದೆ ಸರ್ವರ ಬಾಳಿನಲ್ಲಿ ಏಳಿಗೆಯನ್ನು ಬಯಸಿ ಬದುಕಿದಾಗ ಸಿಗುವ ತೃಪ್ತಿ ಯಾವಾಗಲು ಸರ್ವಶ್ರೇಷ್ಠ ಎಂದು ವಿ.ಕೆ ಸಮೂಹದ (ಮೆಕೊÊಸಂಸ್ಥೆ) ಕಾರ್ಯಧ್ಯಕ್ಷ ಕೆ.ಎಂ ಶೆಟ್ಟಿ ಮಧ್ಯಗುತ್ತು ತಿಳಿಸಿದರು.5 3

ಬಂಟರ ಯಾನೆ ನಾಡವರ ಮಾತೃ ಸಂಘ ಇದರ ಮಂಗಳೂರು ತಾಲೂಕು ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೆಲ್‌ನ ಗೀತಾ ಎಸ್.ಎಂ ಶೆಟ್ಟಿ ಸಭಾಭವನದಲ್ಲಿ ಜರಗಿದ ಭಿನ್ನ ಸಾಮರ್ಥ್ಯರಿಗೆ ಸಹಾಯ ಯೋಜನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಮಾಜದ ಏಳಿಗೆಗೆ ಇಂತಹ ಶ್ರೇಷ್ಠ ಕೆಲಸಕ್ಕೆ ತಾನು ಕೂಡಾ ಸಹಭಾಗಿಯಾಗಿ ಇತರ ಸಮಾಜ ಮುಖಿ ಕಾರ್ಯಕ್ರಮಗಳಿಗೆ ಬೆನ್ನೆಲುಬಾಗಿ ನಿಲ್ಲುವೆ ಎಂದೂ ಕೆ.ಎಂ ಶೆಟ್ಟಿಭರವಸೆಯನ್ನಿತ್ತರು.2

ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷಅಜಿತ್ ಕುಮಾರ್ ರೈ ಮಾಲಾಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದು, ರಾಮಕೃಷ್ಣ ವಿದ್ಯಾ ಸಂಸ್ಥೆಯ ಸಂಚಾಲಕ ಡಾ| ಸಂಜೀವ ರೈ ಉಪಸ್ಥಿತರಿದ್ದು ಸುಮಾರು೧೦ಮಂದಿಭಿನ್ನ ಸಾಮರ್ಥ್ಯರಿಗೆಸಾಂಕೇತಿಕವಾಗಿಸಹಾಯಧನನೀಡಲಾಯಿತು. ಮಂಗಳೂರು ತಾಲೂಕು ವ್ಯಾಪ್ತಿಯ ಸುಮಾರು ೭೫ ಮಂದಿ ಫಲಾನುಭವಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ.

ಸಮಾರಂಭದಲ್ಲಿ ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್.ಪೂಂಜ, ಗುರುಪುರ ಬಂಟರಮಾತೃ ಸಂಘದ ನಿಕಟಪೂರ್ವಧ್ಯಕ್ಷ ರಾಜ್ ಕುಮಾರ್ ಶೆಟ್ಟಿ, ಎಕ್ಕಾರು ಬಂಟರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ, ಜಪುö್ಪ, ಬಂಟರ ಸಂಘದ ಅಧ್ಯಕ್ಷ ರಾಜಕುಮಾರ್ ಶೆಟ್ಟಿ, ಜಯರಾಮ ಸಾಂತ, ವಸಂತ ಶೆಟ್ಟಿ, ಉಮೇಶ್ ಶೆಟ್ಟಿ ಪದವು ಮೇಗಿನಮನೆ, ಸವಿತಾ ಚೌಟ, ಡಾ| ಆಶಾ ಜ್ಯೋತಿ ರೈ ಮತ್ತಿತರ ಗಣ್ಯÀರುಉಪಸ್ಥಿತರಿದ್ದರು.1

ಸಹಾಯ ಧನ ಯೋಜನೆಯ ಸಂಚಾಲಕ ರವೀಂದ್ರನಾಥ ಎಸ್ ಶೆಟ್ಟಿ ಸ್ವಾಗತಿಸಿದರು. ಮಂಗಳೂರುತಾಲೂಕು ಸಮಿತಿಯ ಸಂಚಾಲಕ ಉಲ್ಲಾಸ್ ಆರ್.ಶೆಟ್ಟಿ ಪೆರ್ಮುದೆ ಪ್ರಸ್ತಾವನೆಗೈದರು. ಸುಖೇಶ್ ಚೌಟ ಉಳ್ಳಾಲಗುತ್ತು ಕಾರ್ಯಕ್ರಮ ನಿರ್ವಹಿಸಿದರು. ಸಹಸಂಚಾಲಕ ಎನ್.ಮುರಳೀಧರಶೆಟ್ಟಿ ವಂದಿಸಿದರು.

By suddi9

Leave a Reply

Your email address will not be published. Required fields are marked *