ಬಂಟ್ವಾಳ:ತಾಲ್ಲೂಕಿನ ವಿವಿಧೆಡೆ ಕಳೆದೆರಡು ರಾತ್ರಿ ಗುಡುಗು ಸಹಿತ ಮಳೆಯಾಗಿದ್ದು, ಕೆಲವೊಂದು ಮನೆ ಮತ್ತು ಮಸೀದಿಗೆ ಹಾನಿ ಉಂಟಾದ ಘಟನೆ ನಡೆದಿದೆ.
ತಾಲ್ಲೂಕಿನ ಪೆನರ್ೆ ನಿವಾಸಿ ಶ್ರೀಧರ ಶೆಟ್ಟಿ ಎಂಬವರ ಹಸುವೊಂದು ಸಿಡಿಲು ಬಡಿದು ಸಾವನ್ನಪ್ಪಿದ್ದು, ಪುದು ಗ್ರಾಮದ ಕುಮ್ಡೇಲು ನಿವಾಸಿ ಲೀಲಾ ಎಂಬವರ ಮನೆಗೆ ಮರವೊಂದು ಮುರಿದು ಬಿದ್ದು ಮನೆ ಮಾಡು ಮತ್ತು ಗೋಡೆಗೆ ಅಪಾರ ಹಾನಿಯಾಗಿದೆ.
ಇಲ್ಲಿನ ಕುಜ್ಲುಬೆಟ್ಟು ಎಂಬಲ್ಲಿ ಪಾರ್ವತಿ ಎಂಬವರ ಮನೆ ಗೋಡೆಗೆ ಸಿಡಿಲು ಬಡಿದ ಪರಿಣಾಮ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡು ಅಪಾರ ನಷ್ಟ ಉಂಟಾಗಿದೆ. ವಿಟ್ಲ ಸಮೀಪದ ಕಾಂತಡ್ಕ ಎಂಬಲ್ಲಿ ಮಸೀದಿಯೊಂದಕ್ಕೆ ಸಿಡಿಲು ಬಡಿದು ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಒಟ್ಟು ರೂ.5ಲಕ್ಷಕ್ಕೂ ಮಿಕ್ಕಿ ನಷ್ಟ ಉಂಟಾಗಿರುವ ಬಗ್ಗೆ ಅಂದಾಜಿಸಲಾಗಿದೆ ಎಂದು ತಹಶೀಲ್ದಾರ್ ಬಿ.ಎಸ್.ಮಲ್ಲೇಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಸಿಡಿಲು ನೆಪದಲ್ಲಿ ದೂರವಾಣಿ, ಅಂತಜರ್ಾಲ ಮತ್ತು ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.