ಬಂಟ್ವಾಳ:ಇಲ್ಲಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಸಮೀಪದ ಕೈಕುಂಜೆ ಮುಖ್ಯ ರಸ್ತೆ ಬಳಿ ರೂ ೧ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ‘ಕನ್ನಡ ಭವನ’ ಮತ್ತು ಸಾರ್ವಜನಿಕ ರಂಗ ಮಂದಿರ ಲೋಕಾರ್ಪಣೆ ಹಾಗೂ ತಾಲ್ಲೂಕು ಮಟ್ಟದ ೨೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಮಂಗಳವಾರ ಬಿಡುಗಡೆಗೊಳಿಸಿದರು. ಈ ಕನ್ನಡ ಭವನದಲ್ಲಿ ಸಾಹಿತ್ಯ ಮತ್ತು ವಿವಿಧ ಸಾಮಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯಲಿ ಎಂದು ಅವರು ಶುಭ ಹಾರೈಸಿದರು.9btl-Kasapa

ಇದೇ ೨೦ರಂದು ಕನ್ನಡ ಭವನ ಮತ್ತು ಸಾರ್ವಜನಿಕ ರಂಗಮಂದಿರ ಲೋಕಾರ್ಪಣೆ ನಡೆಯಲಿದ್ದು, ಇದೇ ೨೧ರಂದು ಡಾ.ಸುರೇಶ್ ನೆಗಳಗುಳಿ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ೨೧ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಇದೇ ವೇಳೆ ರಾಷ್ಟ್ರೀಯ ಮಟ್ಟದ ಪುಸ್ತಕ ಮೇಳ ಮತ್ತು ಮಾರಾಟ ಸಹಿತ ವಿವಿಧ ವಿಚಾರ ಗೋಷ್ಠಿ, ಕೃತಿ ಬಿಡುಗಡೆ, ನಾಟಕ, ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಕಸಾಪ ಅಧ್ಯಕ್ಷ ಕೆ.ಮೋಹನ್ ರಾವ್ ತಿಳಿಸಿದರು.

ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಅಧ್ಯಕ್ಷ ಐತಪ್ಪ ಆಳ್ವ ಬಿ.ಸಿ.ರೋಡ್, ಕಸಾಪ ನಿಕಟಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ, ಗೌರವ ಕಾರ್ಯದರ್ಶಿ ರವೀಂದ್ರ ಕುಕ್ಕಾಜೆ, ಕನ್ನಡ ಭವನ ನಿರ್ಮಾಣ ಸಮಿತಿ ಖಜಾಂಚಿ ಎನ್.ಶಿವಶಂಕರ್ ಕೈಕುಂಜೆ, ಕಸಾಪ ಮಾರ್ಗದರ್ಶಕ ಕೈಯೂರು ನಾರಾಯಣ ಭಟ್, ಕಾರ್ಯಕಾರಿ ಸಮಿತಿ ಸದಸ್ಯರಾದ ವಿ.ಸು.ಭಟ್, ಡಿ.ಬಿ.ಅಬ್ದುಲ್ ರಹಿಮಾನ್ ತುಂಬೆ, ಅನಾರು ಕೃಷ್ಣ ಶರ್ಮ, ಗೀತಾ ಎಸ್.ಕೊಂಕೋಡಿ, ಕಸಾಪ ಖಾಯಂ ಆಹ್ವಾನಿತರಾದ ಸರಪಾಡಿ ಅಶೋಕ್ ಶೆಟ್ಟಿ, ರಮಾನಂದ ನೂಜಿಪ್ಪಾಡಿ, ಮಹಾಬಲೇಶ್ವರ ಹೆಬ್ಬಾರ್, ಮೋಹನ್ ಕೆ.ಶ್ರೀಯಾನ್ ರಾಯಿ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *