ಕೈಕಂಬ: ಬಂಟ್ವಾಳ ತಾಲೂಕಿನ ಪಿಲ್ಕಾಜೆಗುತ್ತು ಶ್ರೀ ಪಿಲಿಚಾಮುಂಡಿ ಜುಮಾದಿ ಬಂಟ ,ಮಹಿಸಂದಾಯ ಕೊಡಮಣಿತ್ತಾಯಿ ಮತ್ತು ಪರವಾರ ದೈವಗಳಿಗೆ ಧರ್ಮಚಾವಡಿ ಪಿಲ್ಕಾಜೆಗುತ್ತಿನಲ್ಲಿ ಮಾ. ೧೩ರಂದು ಶನಿವಾರ ನೇಮೋತ್ಸವ ನಡೆಯಲಿದೆ ವಿವಿಧ ಧಾರ್ಮಿಕ ಕ್ಷೇತ್ರದ ಸ್ವಾಮೀಜಿಗಳು , ಧಾರ್ಮಿಕ ಮುಖಂಡರು, ಸಚಿವರು, ಸಂಸದರು, ಶಾಸಕರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.